

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಉಗ್ರರ ನಂಟು ಕುರಿತು ತನಿಖೆ ಚುರುಕುಗೊಳಿಸಿದ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಗುರುವಾರ ಎಸ್ಡಿಪಿಐ/ಪಿಎ್ಐ ಕಚೇರಿ ಸೇರಿದಂತೆ 30 ಕಡೆ ದಾಳಿ ನಡೆಸಿದೆ. ಏರ್ಗನ್, ಮಾರಕಾಸ್ತ್ರ, ದಾಖಲೆ ಪತ್ರಗಳು, ಡಿವಿಆರ್ ಜಪ್ತಿ ಮಾಡಿದೆ. ಜತೆಗೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೈಯದ್ ಸಾಧಿಕ್ ಅಲಿ ಎಂಬಾತನನ್ನು ಬಂಧಿಸಿದೆ.
ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರ ಸಂಬಂಧಿ ನವೀನ್ ಆ.11ರಂದು ಫೇಸ್ಬುಕ್ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ. ಅಂದು ರಾತ್ರಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಗಲಭೆ ನಡೆದಿತ್ತು. ಇದರ ಹಿಂದೆ ಉಗ್ರರ ನಂಟು ಇರುವ ಬಗ್ಗೆ ಶಂಕೆ ಹಿನ್ನೆಲೆಯಲ್ಲಿ ಎನ್ಐಎ ತನಿಖೆ ಕೈಗೊಂಡು ಸೆ.22ರಂದು ಪ್ರತ್ಯೇಕ 2 ಎಫ್ಐಆರ್ ದಾಖಲಿಸಿತ್ತು. ಇದನ್ನೂ ಓದಿ: ಸೈನಿಕರಿಗೆ ಮಾಸ್ಕ್ ಕಳುಹಿಸಿದ ಬಾಲಕಿಗೆ ರಕ್ಷಣಾ ಸಚಿವ ರಾಜನಾಥ್ ಶ್ಲಾಘನೆ
ಇದರ ಬೆನ್ನಲ್ಲೇ ಗುರುವಾರ ಬೆಳಗ್ಗೆ 9 ಗಂಟೆಗೆ ಈ ಕಾರ್ಯಾಚರಣೆ ಶುರು ಮಾಡಿದ್ದು, ಪುಲಿಕೇಶಿನಗರದಲ್ಲಿನ ಎಸ್ಡಿಪಿಐ/ಪಿಎ್ಐಗೆ ಸೇರಿದ 3 ಕಚೇರಿಗಳು, ಬೆಂಗಳೂರು ಘಟಕ ಕಾರ್ಯದರ್ಶಿ, ಗಲಭೆ ಕೇಸಿನ ಪ್ರಮುಖ ಆರೋಪಿ ಸೈಯದ್ ಮುಜಾಮಿಲ್ ಮನೆ ಸೇರಿದಂತೆ ಇತರೆಡೆ ಎನ್ಐಎ ಅಧಿಕಾರಿಗಳು ಶೋಧ ನಡೆಸಿದರು. ಏರ್ಗನ್, ಗುಂಡುಗಳು, ಮಾರಕಾಸಗಳು, ರಾಡ್ಗಳು, ಡಿಜಿಟಲ್ ಡಿವೈರ್ಸ್, ಡಿವಿಆರ್ ಮತ್ತು ಎಸ್ಡಿಪಿಐ/ಪಿಎ್ಐಗೆ ಸೇರಿದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿರುವುದಾಗಿ ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ‘ಭಾರತ-ಚೀನಾ ಗಡಿ ಸಂಘರ್ಷ ಹೊಸ ಸ್ವರೂಪದ್ದು…’
ಗಲಭೆ ಪ್ರಕರಣದ ಕೆಲ ಆರೋಪಿಗಳಿಗೆ ಉಗ್ರ ಸಂಘಟನೆಗಳ ನಂಟು ಹೊಂದಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಹೆಚ್ಚಿನ ತನಿಖೆ ಸಲುವಾಗಿ ಎನ್ಐಎಗೆ ವಹಿಸಿದೆ. ಐಜಿಪಿ ನೇತೃತ್ವದಲ್ಲಿ ತನಿಖೆ ಆರಂಭಿಸಿರುವ ಎನ್ಐಎ ವಿಶೇಷ ತಂಡವು, ಗುರುವಾರ ಸ್ಥಳೀಯ ಪೊಲೀಸರ ಸಹಕಾರದಲ್ಲಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಹಲಸೂರು ಗೇಟ್, ದೇವರಜೀವನಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿರುವ ಎಸ್ಡಿಪಿಐ ಕಚೇರಿಗಳಲ್ಲಿ ಶೋಧ ನಡೆದಿಸಿದೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಎಸ್ಡಿಪಿಐನ ಬೆಂಗಳೂರು ಘಟಕದ ಕಾರ್ಯದರ್ಶಿ ಸೈಯದ್ ಮುಜಾಮಿಲ್, ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ನಾಗವಾರ ವಾರ್ಡ್ ಕಾಂಗ್ರೆಸ್ ಸದಸ್ಯೆ ಪತಿ ಮಾಜಿ ಖಲೀಂ ಪಾಷ, ಪುಲಿಕೇಶಿ ನಗರದ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಾಜಿದ್ ಪಾಷ, ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಆಪ್ತ ಸಹಾಯಕ ಅರುಣ್, ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಆರೋಪ ಎದುರಿಸುತ್ತಿರುವ ಸಮೀವುದ್ದೀನ್ ಹಾಗೂ ಫೈರೋಜ್ ಪಾಷ ಮನೆ ಮತ್ತು ಕಚೇರಿಗಳ ಮೇಲೆ ಎನ್ಐಎ ಕಾರ್ಯಾಚರಣೆ ನಡೆಸಿದೆ.