

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
ಎಂಬತ್ತರ ದಶಕದಿಂದಲೇ ದಿನಪತ್ರಿಕೆ ವಿತರಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ ಶಹಾಪುರದ ರಘುನಾಥ ರಾವ್ ತಿಳಗುಳ. ಆಗಿನ್ನೂ ದಿನಪತ್ರಿಕೆಗಳನ್ನು ಮುದ್ರಣವಾದ ತಕ್ಷಣ ತಲುಪಿಸಲು ಸಮರ್ಪಕ ಸಾರಿಗೆ ವ್ಯವಸ್ಥೆ ಇರಲಿಲ್ಲ. ಆದರೆ ಛಲ ಬಿಡದೆ ಇದೇ ವೃತ್ತಿಯಲ್ಲಿ ಯುವಕರ ಕೈಗಳಿಗೆ ಪಾರ್ಟ್ಟೈಮ್ ಕೆಲಸ ನೀಡಿ ಹಸಿವು ನೀಗಿಸಿದ್ದಾರೆ ತಿಳಗುಳ. ಇವರಲ್ಲಿ ವಿತರಕರಾಗಿ ಕೆಲಸ ಮಾಡಿದ್ದ ಅನೇಕರು ವೈದ್ಯರಾಗಿದ್ದಾರೆ. ಕೆಲವರು ಪೊಲೀಸ್ ಇಲಾಖೆಯಲ್ಲಿ, ಇನ್ನು ಕೆಲವರು ಸೈನ್ಯದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ‘ಪತ್ರಿಕಾ ವಿತರಣೆ ನನ್ನ ಪಾಲಿಗೆ ಪವಿತ್ರ. ಈಗಲೂ ನಮ್ಮ ಕುಟುಂಬದ ಎಲ್ಲರೂ ಪತ್ರಿಕಾ ವಿತರಣೆ ಕಾಯಕದಲ್ಲೇ ತೊಡಗಿದ್ದೇವೆ’ ಎನ್ನುತ್ತಾರೆ ರಾವ್.