ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನರಸಾಪುರ ಬಳಿ ಇರುವ ಟಾಟಾ ಎಲೆಕ್ಟಾçನಿಕ್ಸ್ ಕಂಪನಿಯ ಐಫೋನ್ ಅಸೆಂಬ್ಲಿ ಘಟಕವು ಮೂರು ವರ್ಷಗಳ ಅವಧಿಗೆ ೨೫ ಸಾವಿರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದರು, ಅವಧಿ ಮುಗಿದ ನಂತರ ಆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹೊಸಬರನ್ನು ನೇಮಿಸಿಕೊಂಡಿದ್ದಾರೆ.
ಇದರಿಂದ ೨೫ ಸಾವಿರ ಕಾರ್ಮಿಕರು ಬೀದಿಗೆ ಬರುವಂತೆ ಆಗಿದೆ. ಹಾಗೂ ಸ್ಥಳೀಯ ಕೈಗಾರಿಕೆಗಳ ಉದ್ಯೋಗದಿಂದಲೂ ವಂಚಿತರಾಗಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇತ್ಯರ್ಥ ಪಡಿಸಬೇಕಾಗಿದೆ ಎಂದು ಲೋಕಸಭೆ ಅಧಿವೇಶನದಲ್ಲಿ ಸಂಸದ ಎಂ.ಮಲ್ಲೇಶ್‌ಬಾಬು ಕೇಂದ್ರ ಕಾರ್ಮಿಕ ಸಚಿವರ ಗಮನ ಸೆಳೆದರು.
ಕಾರ್ಮಿಕ ಸಚಿವರು ಉತ್ತರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಚಿತ್ರ ೦೫ ಕೆ.ಎಲ್.ಆರ್. ೦೫ : ಎಂ.ಮಲ್ಲೇಶ್‌ಬಾಬು ರವರ ಭಾವಚಿತ್ರ