ವಿಜಯವಾಣಿ ಸುದ್ದಿಜಾಲ ಕೋಲಾರ
೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೋಲಾರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಿಂದ ರಾಜ್ಯೋತ್ಸವ ಪ್ರಶಸ್ತಿಗೆ ೧೫ ಜನ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಇಂದು ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.
೧. ವಿ. ಬಸವರಾಜು-ಜಾನಪದ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ತೂಪಲ್ಲಿ ಗ್ರಾಮದವರಾಗಿದ್ದು, ಸುಮಾರು ೩೦ ವರ್ಷಗಳಿಂದ ನೃತ್ಯ ರೂಪಕ ಪಂಡರಿ ಭಜನೆ, ಚೆಕ್ಕೆ ಕೋಲಾಟ, ಜಾನವಪದ ಕಲಾಪ್ರದರ್ಶನಗಳನ್ನು ನೀಡಿ ಜಿಲ್ಲೆಯಲ್ಲಿ ಹೆಸರುಗಳಿಸಿರುತ್ತಾರೆ. ಸದರಿಯವರು ನೆರೆ ರಾಜ್ಯಗಳಲ್ಲಿಯೂ ಆನೇಕ ಕಾರ್ಯಕ್ರಮಗಳನ್ನು ನೀಡಿ ಪ್ರಶಸ್ತಿ ಗೌರವಗಳನ್ನು ಸ್ವೀಕರಿಸಿರುತ್ತಾರೆ. ಕನ್ನಡ ನಾಡು-ನುಡಿ, ಕಲೆ-ಸಂಸ್ಕೃತಿ ಬೆಳೆಸುವಲ್ಲಿ ಪ್ರಾಮಾಣಿಕ ಸೇವೆಯನ್ನು ಮಾಡಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಸುವ ಜಿಲ್ಲಾ ಉತ್ಸವ, ಜನಪರ ಉತ್ಸವ, ಗಡಿನಾಡ ಉತ್ಸವ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜಿಲ್ಲೆಯಲ್ಲಿ ಜಾನಪದ ಕಲೆಯನ್ನು ಪ್ರದರ್ಶಿಸಿರುತ್ತಾರೆ
೨. ಕೆ.ಎನ್. ರವೀಂದ್ರನಾಥ್-ಸಮಾಜ ಸೇವೆ
ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನವರಾಗಿದ್ದು, ವಾಣಿಜ್ಯ ಪದವಿದರರಾಗಿರುತ್ತಾರೆ. ರಾಜ್ಯ ಪೋಲಿಸ್ ಇಲಾಖೆಯಲ್ಲಿ ೩೪ ವರ್ಷ ಸುಧೀರ್ಘ ಸೇವೆಯನ್ನು ಸಲ್ಲಿಸಿ ಸಹಾಯಕ ಪೋಲಿಸ್ ಉಪನೀರಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ. ಸದರಿಯವರು ವಿದ್ಯಾರ್ಥಿ ದೆಸೆಯಿಂದಲೂ ಮುಖಂಡನಾಗಿ, ಆನೇಕ ಜನಪದ, ಸಾಮಾಜಿಕ ಹೋರಾಟ, ಸರ್ವರಿಗೂ ಸಮಬಾಳು ಸರ್ವ ಧರ್ಮಗಳ ಶಾಂತಿ, ಎಂಬ ಸಿದ್ಧಾಂತದ ಅಡಿಯಲ್ಲಿ ಆನೇಕ ಜನಪರ ಕಾರ್ಯಗಳನ್ನು ನೆಡೆಸಿಕೊಂಡು ಬಂದಿರುತ್ತಾರೆ, ಸಮಾಜ ಸೇವೆಯನ್ನು ನೀರಂರತವಾಗಿ ಮಾಡಿಕೊಂಡು ಬಂದಿದ್ದು, ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಜನರಾಗಿರುತ್ತಾರೆ.
೩. ಜಯಮಂಗಲ ಚಂದ್ರಶೇಖರ್-ಸಾಹಿತ್ಯ ಕ್ಷೇತ್ರ
ಜಯಮಂಗಲ ಚಂದ್ರಶೇಖರ್(ಜಮುಚAದ್ರ) ಕವಿ, ಸಾಹಿತಿ, ಗಾಯಕ, ರಂಗ ಕಲಾವಿದರಾಗಿರುತ್ತಾರೆ. ಕನ್ನಡದಲಿ ಎಂ.ಎ ಪದವಿಯನ್ನು ಪಡೆದಿರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಆನೇಕ ಕೃತಿಗಳನ್ನು, ಕವರನ ಸಂಕಲನಗಳು, ಶಿಶು ಗೀತೆಗಳು, ಕೈವಾರ ತಾತಾಯ್ಯನವರ ತತ್ವಪದಗಳಿಗೆ ಭಾವನುವಾದ, ಪರಿಸರ ಗೀತೆಗಳು, ಹಾಗೂ ಜಾಗೃತಿ ಮೂಡಿಸುವ ನಾಟಕಗಳು ರಚಿಸಿರುತ್ತಾರೆ. ಅಲ್ಲದೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಆಗಿದ್ದು, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗಳು ಪಡೆದಿರುತ್ತಾರೆ. ಈ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಬಾಜನರಾಗಿದ್ದಾರೆ.
೪. ಬೆಂಜಮಿನ್ ಜೋಸೆಪ್ ಗೋಣಿ-ಕನ್ನಡ ಸೇವೆ
ಕನ್ನಡ ಮಿತ್ರರು ಬೆಳವಣಿಗೆಯನ್ನು ಗುರುತಿಸುವಾಗ ಶ್ರೀ ಬೆಂಜಮಿನ್ ಜೋಸೆಪ್ ಗೋಣೀಯವರ ಕನ್ನಡವೇ ಇಲ್ಲದ ಕೆ.ಜಿ.ಎಫ್ ತಾಲ್ಲೂಕಿನಲ್ಲಿ ಕನ್ನಡ, ಸಾಹಿತ್ಯ, ಸಂಗೀತ, ನಾಟಕ ಹೀಗೆ ಹಲವಾರು ಚಟುವಟಿಕೆಗಳು ನಡೆಯುವಂತಾಗಲು ಇವರ ಪಾತ್ರ ಬಹುಮುಖ್ಯ ವಾಗಿರುತ್ತದೆ. ಸದರಿಯವರು ಬಿ.ಎಂ. ಶ್ರೀ ಭವನ, ಗುಬ್ಬಿ ವೀರಣ್ಣ ರಂಗಮAದಿರ, ವಿಶ್ವೇಶ್ವರಯ್ಯ ಹೆಬ್ಬಾಗಿಲು, ಬೆಮೆಲ್ ಕ್ಲಬ್ ನಿರ್ಮಾಣ ಕಾರ್ಯಗಳಲ್ಲಿ ಸಲ್ಲಿಸಿರುವ ಸೇವೆ ಸ್ಮರಣೀಯವಾದುದ್ದು. ಕನ್ನಡ ಪ್ರಾಧಿಕಾರದ ಕನ್ನಡ ಅನುಷ್ಠಾನ ಸಮಿತಿಯ ಸದಸ್ಯರಾಗಿಯೂ ಉತ್ತಮ ಸೇವೆ ಸಲ್ಲಿಸಿರುತ್ತಾರೆ. ಗಡಿನಾಡು-ನುಡಿ-ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಿದ ಗೋಣಿರವರು ಸೇವೆಯನ್ನು ಅಭಿನಂದಿಸುತ್ತಾ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೫. ಬಿ.ಎಲ್.ರಾಜೇಂದ್ರ ಸಿಂಹ-ದೃಶ್ಯ ಪತ್ರಿಕೋದ್ಯಮ
ಬಿ.ಎಲ್. ರಾಜೇಂದ್ರ ಸಿಂಹರವರು ಸ್ನಾತಕೊತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣಪಡೆದಿರುತ್ತಾರೆ. ಹಾಗೂ ಟಿ.ವಿ ೯ ಮಾಧ್ಯಮದಲ್ಲಿ ೧೮ ವರ್ಷ ಸೇವೆ ಸಲ್ಲಿಸಿರುವ ಅವಧಿಯಲ್ಲಿ ಹಿರಿಯ ವರದಿಗಾರರಾಗಿ, ಜಿಲ್ಲೆಯ ಅಭಿವಧ್ಧಿಯಲ್ಲಿ ಸಮಾಜದ ಆರೋಗ್ಯ ಅರಿವು, ವೈಚಾರಿಕ, ಸಾಮಾಜಿಕ ವಿಚಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ವರದಿಗಳನ್ನು ಮಾಡಿರುತ್ತಾರೆ.
ಟಿ.ವಿ. ಮಾಧ್ಯಮದಲ್ಲಿ, ಹೀಗೂ ಉಂಟೆ, ನಿಮಗೊಂದು ಸಲಾಂ, ಓಂ ಹಾಗೂ ಆರಾಧನೆ, ಜಿಲ್ಲೆಯ ಐತಿಹಾಸಿಕ, ಪುರಾತನ ದೇವಾಲಯಗಳ ಬಗ್ಗೆ ಅಧ್ಯಯನ ಮಾಡಿ, ಆನೇಕ ಮೂಡನಂಬಿಕೆಗಳನ್ನು ಹೊರಗೆಳೆದು, ಜನರಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುವಂತೆ ವರದಿ ಮಾಡಿರುತ್ತಾರೆ. ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೬. ಎನ್. ನಾಗೇಶ್-ಕ್ರೀಡಾ ಕ್ಷೇತ್ರ
ಎನ್.ನಾಗೇಶ್ ರವರು ಅಂಗವೀಕಲರಾಗಿದ್ದು, ಅದನ್ನು ಲೆಕ್ಕಿಸದ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಡ್ವರ್ಫ್ ಕ್ರೀಡೆಯಲ್ಲಿ ರಾಜ್ಯಪಾಲರಿಂದ ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ. ಕುಬ್ಜರ ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕಗಳಿಸಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸಾಧಬೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೆ.ಜಿ. ಎಫ್ ಗೆ ಚಿನ್ನದ ಪದಕ ಗಳಿಸಿ ಕೊಟ್ಟಿದ್ದಾರೆ. ಟೋರಾಂಟೋದಲ್ಲಿ ನಡೆದ ವಿಶ್ವ ಕುಬ್ಬರ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ರಾಷ್ಟ್ರಕ್ಕೆ ಹೆಸರು ತಂದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ, ಅಂಧ್ರ, ತಮಿಳುನಾಡು ರಾಜ್ಯಮಟ್ಟದಲ್ಲಿ, ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿರುತ್ತಾರೆ. ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೭.ಡಾ.ವೈ.ಪಿ. ನಾಟರಾಜ್ ಡೋಲು ಕಲಾವಿದರು
ಡಾ.ವೈಪಿ.ನಟರಾಜ್ ಡೋಲು ಕಲಾವಿದರಾಗಿದ್ದು, ಮಾಲೂರು ತಾಲ್ಲೂಕಿನವರಾಗಿದ್ದಾರೆ. ಸದರಿಯವರು ೩೦ ವರ್ಷಗಳಿಂದ ಡೋಲು ನುಡಿಸುತ್ತಾ ಡಾಕ್ಟರೇಟ್ ಪದವಿ ಮತ್ತು ಆಕಾಶವಾಣಿಯಲ್ಲಿ ಬಿ.ಐ ಗ್ರೇಡ್ ಪಡೆದಿರುತ್ತಾರೆ. ಹಾಗೂ ೧೫ ವರ್ಷಗಳಿಂದ ಕಲಾ ಸೇವೆಯನ್ನು ನಿರಂತರವಾಗಿ ಮಾಡುತ್ತಾ, ಹೊರರಾಜ್ಯಗಳಲ್ಲಿಯೂ ಸಹ ಕಾರ್ಯಕ್ರಮಗಳನ್ನು ನೀಡಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಯಾವುದೇ ಜಾತಿ ಮತ ಬೇದಗಳಿಲ್ಲದ ಸರ್ವಧರ್ಮ ಸಮನ್ವಯ ಪಾಲನೆ ಮಾಡಲು ಎಲ್ಲಾ ಜಾತಿಯ ಮಕ್ಕಳಿಗೂ ಡೋಲು ವಿದ್ಯೆಯನ್ನು ಕಲಿಸುತ್ತಾ, ಸೇವೆಯನು ಮುಂದುವರಿಸಿಕೊAಡು ಬರುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಅಭಿನಂದಿಸಿದ್ದಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೮.ವಿ. ನಾರಾಯಣಪ್ಪ-ಸಮಾಜ ಸೇವೆ
ವಿ.ನಾರಾಯಣಪ್ಪ ರವರು ಕೋಲಾರ ತಾಲ್ಲೂಕಿನ ಜನ್ನಘಟ್ಟ ಗ್ರಾಮದ ನಿವಾಸಿಯಾಗಿದ್ದು, ೩೦ ವರ್ಷಗಳಿಂದ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆರೋಗ್ಯ, ಶಿಕ್ಷಣ, ಸಾಕ್ಷರತೆ ಕಾರ್ಯಕ್ರಮಗಳು, ಮುಂದುವರಿಕೆ ಶಿಕ್ಷಣ, ಲೋಕಶಿಕ್ಷಣ ಕಾರ್ಯಕ್ರಮಗಳಲ್ಲಿ ಪ್ರೇರಕರಾಗಿ, ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಅಂಗವಿಕಲರ ಸಂಘದ ಕಾರ್ಯದರ್ಶಿಯಾಗಿ, ಆಶಾಕಿರಣ ಮಂದಾರ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದ್ದಿಲ್ಲದ ಸಾಧನೆಯನ್ನು ಮಾಡಿರುವದರಿಂದ ಹತ್ತು ಹಲವಾರು ಸಂಘ ಸಂಸ್ಥೆಗಳವರು ಪ್ರಶಸ್ತಿ ಸನ್ಮಾನಗಳನ್ನು ಮಾಡಿ ಅಬಿನಂದಿಸಿರುತ್ತಾರೆ. ಇವರ ಸಾಧನೆ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲಿಯೂ ಪ್ರಚಾರ ಮಾಡಲಾಗಿರುತ್ತದೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೯. ಎಸ್.ಎನ್. ಕೋದಂಡರಾಮಯ್ಯ-ಶಿಕ್ಷಣ ಕ್ಷೇತ್ರ
ಎಸ್.ಎನ್.ಕೋದಂಡರಾಮಯ್ಯ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಪಿ. ಚನ್ನಯ್ಯಗಾರಿಪಲ್ಲಿ ಗ್ರಾಮದವರಾಗಿದ್ದು, ಸದರಿಯವರು ಕೋಲಾರ ಜಿಲ್ಲೆ ಗಡಿ ಭಾಗದಲ್ಲಿದ್ದು ೨೫ ಕುಟುಂಭಗಳಿರುವ ,೧೦೨ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಕೆ ಪ್ರಾರಂಭಿಸಿ, ಶಿಕ್ಷಕರು ಒದಗಿಸುತ್ತಿರುವ ಗುಣಮಟ್ಟದ ಶಿಕ್ಷಣದಿಂದ ಆಕರ್ಷಿತರಾದ ಊರಿನ ಪೋಷಕರು ತಮ್ಮ ಇಲ್ಲಾ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವಂತೆ ಮಾಡಿದ್ದಾರೆ. ಶಾಲೆಯಲ್ಲಿ ಚಿತ್ರಗಳ ಮೂಲಕ ಪರಿಸರ ಸಂರಕ್ಷಣೆ, ಶಿಕ್ಷಣ, ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳ ಪರಿಚಯ, ಪ್ರಾಣಿ ಪಕ್ಷಿಗಳ ಪರಿಚಯ,ಆಟ-ಪಾಠಗಳು, ಕವಿಗಳು, ಸಾಹಿತಿಗಳು, ಭವ್ಯ ಕರ್ನಾಟಕದ ಪರಿಚಯ, ನಾಡು-ನುಡಿ, ಸಂಸ್ಕೃತಿಯನ್ನು ಪರಿಚಯಿಸುವತ್ತಾ, ಮಕ್ಕಳಲ್ಲಿ, ಪೋಷಕರಲ್ಲಿ ಅರಿವು ಮೂಡಿಸಿ, ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಮಾಡಿದ್ದಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೧೦. ಕೆ.ಬಿ. ಜಗದೀಶ್-ಪತ್ರಿಕೋದ್ಯಮ
ಕೆ.ಬಿ. ಜಗದೀಶ್ ರವರು ವಾಣಿಜ್ಯ ಪದವಿದರರಾಗಿರುತ್ತಾರೆ. ವಿದ್ಯಾರ್ಥಿ ದೆಸೆಯಿಂದಲೇ ನಾಡು-ನುಡಿಗಳಲ್ಲಿ ಆಸಕ್ತಿಹೊಂದಿದ್ದು, ಕನ್ನಡ ಪರ ಹೋರಾಟಗಳಲ್ಲಿ, ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ೧೯೮೬ ರಲ್ಲಿ ಶ್ರೀ ಜಯಚಾಮರಾಜೇಂದ್ರ ಕನ್ನಡ ಸಂಘವನ್ನು ಸ್ಥಾಪಿಸಿ, ನಂತರ ಶ್ರೀ ಭುವನೇಶ್ವರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಪರ ಹೋರಾಟಗಳು, ನೀರಾವರಿ ಹೋರಾಟಗಳು , ಕಾರ್ಮಿಕಪರ ಹೋರಾಟಗಳಲ್ಲಿ ಭಾಗವಹಿಸಿ, ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡು, ಸೇವೆ ಸಲ್ಲಿಸಿದ್ದಾರೆ. ಸದರಿಯವರಿ ಹೊನ್ನುಡಿ ದಿನಪತ್ರಿಕೆ, ವಿಜಯ ದ್ವನಿ, ಸಂಜೆವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಪುರಸ್ಕಾರ ಸ್ವೀಕರಿಸಿರುತ್ತಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೧೧. ಸ್ನೇಕ್‌ನಾಗರಾಜ್-ಸಮಾಜ ಸೇವೆ
ಕೋಲಾರ ಜಿಲ್ಲೆಯಲ್ಲಿ ಸ್ನೇಕ್‌ನಾಗರಾಜ್ ಎಂದೇ ಹೆಸರುವಾಸಿಯಾಗಿದ್ದು, ೪೧ ವರ್ಷಗಳಿಂದ ಸುಮಾರು ೪೦೦೦ ಉರಗಗಳನ್ನು ಹಿಡಿದು ಅರಣ್ಯದಲ್ಲಿ ಬಿಟ್ಟು ಸಂರಕ್ಷಣೆ ಮಾಡಿರುತ್ತಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೧೨. ಡಾ.ಶಂಕರಪ್ಪ-ಸಾಹಿತ್ಯ ಕ್ಷೇತ್ರ
ಡಾ.ಆರ್.ಶಂಕರಪ್ಪ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಗುಟ್ಟಹಳ್ಳಿಯವರಾಗಿದ್ದು, ಬಡಕುಟುಂಬದಲ್ಲಿ ಬೆಳೆದು ವಿದ್ಯಾವಂತರಾಗಿ, ಕಷ್ಟಗಳಲ್ಲಿಯೂ ಎರಡುವರ್ಷ ರೈತರಾಗಿ ದುಡಿದು, ಸ್ನೇಹಿತರ ಸಹಾಯದಿಂದ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದು, ಪಿ.ಹೆಚ್.ಡಿ ಮಾರ್ಗದರ್ಶಕರಾಗಿ ಲೇಖನಗಳನ್ನು ಬರೆಯಲು ಪ್ರಾರಂಭಿಸಿರುತ್ತಾರೆ. ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕನ್ನಡದಲ್ಲಿ ೨೮ ಸಂಶೋಧನ ಕೃತಿ ಹಾಗೂ ಲೇಖನಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ. ೨೫ ಶಾಲೆಗಳ ೧೩೦೦ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕೆ ಸಾಮಾಗ್ರಿಗಳನ್ನು, ಗ್ರಂಥಾಲಯಗಳಿಗೆ ಉಚಿತ ಪುಸ್ತಕಗಳನ್ನು ಸಮಸ್ತ ಜನರಿಗೆ ಉಪಯೋಗವಾಗಿಲಿ ಎಂದು ನೀಡಿರುತ್ತಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ
೧೩. ವಿಶ್ವಾನಾಥ್-ಸಂಗೀತ ಕ್ಷೇತ್ರ
ವಿಶ್ವನಾಥ್ ರವರು ಶ್ರೀನಿವಾಸಪುರ ತಾಲ್ಲೂಕು ಸುಣ್ಣಕಲ್ಲು ಗ್ರಾಮದವರಾಗಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾರ್ಮೋನಿಯಂ ಕಲಾವಿದರಾಗಿದ್ದು, ೩೦ ವರ್ಷಗಳ ಅನುಭವ ಹೊಂದಿರುತ್ತಾರೆ. ಸದರಿಯವರು ಎ ಗ್ರೇಡ್ ಕಲಾವಿದರಾಗಿದ್ದು, ದೆಹಲಿ ಕನ್ನಡ ಸಂಘ, ಹಂಪಿ ಉತ್ಸವ, ಧರ್ಮ ಸ್ಥಳ ಸರ್ವಧರ್ಮ ಸಮ್ಮೇಳನ, ಕದಂಬೋತ್ಸವ, ಮೈಸೂರು ಅರಮನೆ ಸಾಂಸ್ಕೃತಿಕ ವೇದಿಕೆಯಲ್ಲಿ, ಶ್ರೀ ಕೈವಾರ ಕ್ಷೇತ್ರದಲ್ಲಿ ಸಂಗೀತೋತ್ಸವ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಪ್ರಶಸಿ ಸನ್ಮಾನಗಳನ್ನು ಪಡೆದು ಹೆಸರು ಗಳಿಸಿರುತ್ತಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೧೪. ಹೆಚ್ .ಕೆ. ಸತೀಶ್-ನಾಣ್ಯ ಸಂಗ್ರಹಣೆ
ಹೆಚ್.ಕೆ.ಸತೀಶ್ ರವರು ಎಂ.ಎ. ಬಿ.ಇ.ಡಿ ಪದವೀಧರರಾಗಿದ್ದು, ಮುಳಬಾಗಿಲು ನಿವಾಸಿಯಾಗಿದ್ದು, ಪ್ರಾಚೀನ ವಸ್ತುಗಳ ಸಂಗ್ರಾಹಣೆಯನ್ನು ಮಾಡುವ ಹಾವ್ಯಸದಲ್ಲಿ ತೊಡಗಿದ್ದು, ಇವರು ಹಳೇ ಕಾಲದ ನಾಣ್ಯಗಳನ್ನು, ಅಂಚೆ ಚೀಟಿಗಳನ್ನು, ಸಂಗ್ರಹಣೆ ಮಾಡುತ್ತಿದ್ದು, ಗಾಂಧಿಜೀಯವರ ಕಾಲದ ಅಂಚೆ ಚೀಟಿಗಳಿಂದ ಇತ್ತೀಚಿನವರೆಗೆ ಸಂಗ್ರಹ ಮಾಡಿದ ಅಂಚೆ ಚೀಟಿಗಳನ್ನು ಸಂಗ್ರಹಿಸಿ ಈಗಿನ ಪೀಳಿಗೆಗೆ ತಿಳಿಸುವ ಇಚ್ಛೆಯನ್ನು ಹೊಂದಿರುತ್ತಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
೧೫. ಕಾಂತಮ್ಮ-ಕೃಷಿ ಕ್ಷೇತ್ರ
ಕಾಂತಮ್ಮ ಲೇಟ್ ಸೊಣ್ಣಪ್ಪಯ್ಯನವರ ಪತ್ನಿಯಾಗಿದ್ದು, ಕೋಲಾರ ತಾಲ್ಲೂಕು ಗಂಗಾಪುರ ಗ್ರಾಮದವರಾಗಿದ್ದು, ಕೃಷಿ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಗ್ರಾಮೀಣಾ ಮಹಿಳೆಯಾಗಿರುತ್ತಾರೆ. ಇವರು ತಮ್ಮ ಕುಟುಂಬ ೪ ಎಕರೆ ಜಮೀನು ಹೊಂದಿದ್ದು, ಹಲವಾರು ರೀತಿಯ ಧನ್ಯಗಳು, ಹಣ್ಣುಗಳು ತರಕಾರಿಗಳು, ಹೂವುಗಳನ್ನು ಬೆಳೆದು, ರಾತ್ರಿ ಹಗಲು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿ, ತಾಂತ್ರಿಕತೆಯನ್ನು ಅಳವಡಿಸಿಕೊಂಡು ದುಡಿಯುತ್ತಿರುವ ಮಹಿಳೆಯಾಗಿದ್ದಾರೆ. ಹಾಗೂ ಧನಕರುಗಳನ್ನು, ಕೋಳಿ, ಕುರಿಗಳ ಸಾಕಾಣೆಯಲ್ಲಿ ಹೆಸರು ಗಳಿಸಿದ್ದಾರೆ.ಅರಣ್ಯ ಸಸ್ಯಗಳಾದ ಹಲಸು, ಹೆಬ್ಬೇವು ಗಿಡಗಳನ್ನು ಸಹ ಜಮೀನಿನ ಬದಿಗಳಲ್ಲಿ ಬೆಳೆದು, ಹೈನುಗಾರಿಕೆಯನ್ನುಸಹ ಮಾಡುತ್ತಿದ್ದಾರೆ. ಸದರಿಯವರಿಗೆ ೨೦೨೪-೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಚಿತ್ರ ೩೧ ಕೆ.ಎಲ್.ಆರ್. ೦೨ : ೧೫ ಜನ ಸಾಧಕರ ಭಾವಚಿತ್ರಗಳು