ವಿಜಯವಾಣಿ ಸುದ್ದಿಜಾಲ ಕೋಲಾರ
ಸ್ನಾತಕೋತ್ತರ ಪದವಿಗಳಲ್ಲಿ ೨೦೧೮-೧೯ ಹಾಗೂ ೨೦೨೦ರ ಅವಧಿಯಲ್ಲಿ ಸಿಪಿಸಿಎಸ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡಿ ಅನುತೀರ್ಣರಾಗಿರುವ ಹಳೆ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಒಂದು ಬಾರಿ ಅವಧಿಗೆ ಮಾತ್ರ ಪರೀಕ್ಷೆ ಬರೆಯಲು ಬೆಂಗಳೂರು ಉತ್ತರ ವಿವಿ ಸುವರ್ಣಾವಕಾಶ ಕಲ್ಪಿಸಿದ್ದು, ದಂಡವಿಲ್ಲದೇ ಶುಲ್ಕ ಪಾವತಿಸಲು ನ.೧೫ ಕೊನೆ ದಿನವಾಗಿದೆ ಎಂದು ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಲೋಕನಾಥ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಿಬಿಸಿಎಸ್ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಿದ ಹಲವಾರು ಅನುತ್ತೀರ್ಣ ವಿದ್ಯಾರ್ಥಿಗಳ ಮನವಿ ಮೇರೆಗೆ ವಿವಿ ಸಿಂಡಿಕೇಟ್‌ನ ಅನುಮೋದನೆ ಹಾಗೂ ಕುಲಪತಿಗಳ ಅನುಮತಿ ಪಡೆದು ನಾಪಾಸಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಸದಾವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನಲ್ಲಿ ಪದವಿ ಹಾಗೂ ಸ್ನಾತಕ ಪದವಿ ಪೂರ್ಣಗೊಳಿಸಲು ೪ ವರ್ಷ ಅವಕಾಶ ನೀಡಲಾಗಿತ್ತು. ಆದರೆ ಈ ಸಾಲಿನಲ್ಲಿ ಪರೀಕ್ಷೆ ಬರೆದ ಹಲವಾರು ವಿದ್ಯಾರ್ಥಿಗಳು ತೇರ್ಗಡೆಯಾಗಲು ಸಾಧ್ಯವಾಗದೆ ಇನ್ನೊಂದು ಅವಕಾಶಕ್ಕೆ ಮಾಡಿದ ಮನವಿಗೆ ಸ್ಪಂದಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿವಿಯ ವೆಬ್ ಸೈಟ್ ಅಥವಾ ದೂರವಾಣಿ ಸಂಖ್ಯೆಗಳು-೬೩೬೩೩೨೯೫೪೭, ೬೩೬೩೩೧೯೬೪೬, ೬೩೬೩೩೨೭೦೨೦ ರಲ್ಲಿ ಸಂಪರ್ಕಿಸಲು ಕೋರಿದ್ದಾರೆ.
ಚಿತ್ರ ೨೮ ಕೆ.ಎಲ್.ಆರ್. ೦೭ : ಕೋಲಾರದಲ್ಲಿನ ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಲೋಕನಾಥ್.