ಹೊಸತನದ ಬದಲಾವಣೆಯೇ ಯುಗಾದಿ

02bhr 1jci
ಬಾಳೆಹೊನ್ನೂರಿನ ಜೆಸಿಐನಿಂದ ಯುಗಾದಿ ಅಂಗವಾಗಿ ಬೇವು-ಬೆಲ್ಲ ಹಂಚಿ ಸಂಭ್ರಮಿಸಲಾಯಿತು. ಇಬ್ರಾಹಿಂ ಶಾಫಿ, ಕೆ.ಎಂ.ರಾಘವೇಂದ್ರ, ಎನ್.ಶಶಿಧರ್, ಅಶೋಕ್, ಸುರೇಂದ್ರ, ಸುಧಾಕರ್, ಚೈತನ್ಯ ವೆಂಕಿ ಇದ್ದರು.
Published on

ಬಾಳೆಹೊನ್ನೂರು: ಕಷ್ಟ-ಸುಖದ ಸಮರಸದ ಜೀವನವೇ ಯುಗಾದಿಯ ಉದ್ದೇಶ ಎಂದು ಶಿಕ್ಷಕ ಕೆ.ಎಂ.ರಾಘವೇಂದ್ರ ಹೇಳಿದರು.

ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ಯುಗಾದಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತಮ ಕಾರ್ಯ ಹಾಗೂ ಹೊಸತನದ ಮೂಲಕ ಬದಲಾವಣೆ ಮಾಡಿಕೊಂಡು ಜೀವನ ಸಾಗಿಸುವುದೇ ಯುಗಾದಿಯ ಅರ್ಥವಾಗಿದೆ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದ್ದು ಇಲ್ಲಿ ನೂರಾರು ಹಬ್ಬ ಆಚರಿಸಲಾಗುತ್ತದೆ. ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ. ಇದರಲ್ಲಿ ಯುಗಾದಿ ಹಬ್ಬಕ್ಕೆ ಪ್ರಾಕೃತಿಕ, ವೈಜ್ಞಾನಿಕ, ಧಾರ್ಮಿಕ, ಸಾಂಸ್ಕೃತಿಕ, ಪೌರಾಣಿಕ ಮಹತ್ವವಿದೆ ಎಂದರು.

ಯುಗಾದಿಯು ಪ್ರಾಕೃತಿಕವಾಗಿ ಪ್ರಕೃತಿಗೆ ಹೊಸತನ ತರುವ ಕಾಲ, ಧಾರ್ಮಿಕವಾಗಿ ಬ್ರಹ್ಮ ತನ್ನ ಸೃಷ್ಟಿಯನ್ನು ಆರಂಭಿಸಿದ ದಿನ, ಪಂಚಾಂಗ ಶ್ರವಣ, ಚಂದ್ರದರ್ಶನದ ಮೂಲಕ ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳುವ ದಿನ. ವೈಜ್ಞಾನಿಕವಾಗಿ ಬೇವು-ಬೆಲ್ಲ ಸೇವನೆ ಮೂಲಕ ಆರೋಗ್ಯಯುತ ಜೀವನಕ್ಕೆ ಮುಂದಡಿಯಿಡುವ ದಿನವಾಗಿದೆ. ಬೇವು-ಬೆಲ್ಲವು ಯುಗದ ಆದಿಯಲ್ಲಿ ಕಷ್ಟ-ಸುಖಗಳು ಸಮನಾಗಿ ದೊರೆಯಲಿ ಎಂದು ಸ್ವೀಕರಿಸುವ ದಿನವಾದರೂ ಸಹ ವೈಜ್ಞಾನಿಕವಾಗಿ ಆರೋಗ್ಯದ ಉದ್ದೇಶವೂ ಇದೆ ಎಂದು ತಿಳಿಸಿದರು.

ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುರೇಂದ್ರ, ಸುಧಾಕರ್, ಚೈತನ್ಯ ವೆಂಕಿ, ಯಶವಂತ್, ಸದಸ್ಯರಾದ ಕೆ.ಪ್ರಸಾದ್, ಕೆ.ಪ್ರಶಾಂತ್‌ಕುಮಾರ್, ಶಾಹಿದ್, ರಾಮ್‌ಪ್ರಸಾದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net