ಹೊಂಡರಬಾಳು ಗ್ರಾಮದಲ್ಲಿ ಚಿರತೆ ದಾಳಿ, ಮೇಕೆ ಬಲಿ..

Published on

ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ರೈತ ನಟರಾಜು ಸಾಕಿದ್ದ ಮೇಕೆ ಮೇಲೆ ಚಿರತೆ ದಾಳಿ‌ ಮಾಡಿದೆ.

ಶುಕ್ರವಾರ ರಾತ್ರಿ 8.30ರ ವೇಳೆಯಲ್ಲಿ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿದ್ದ ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ. ಕೊಟ್ಟಿಗೆಯಲ್ಲಿ ಒಟ್ಟು 5 ಮೇಕೆಗಳು ಇದ್ದವು. ಚಿರತೆ ಒಂದು ಮೇಕೆಯ ಕತ್ತು ಕಚ್ಚಿ‌ ಸಾಯಿಸಿದೆ.

ಸದ್ದು ಕೇಳಿ ಮನೆಯವರು ಕೊಟ್ಟಿಗೆ ಹತ್ತಿರಕ್ಕೆ ಹೋಗಿ ನೋಡಿದಾಗ ಚಿರತೆ ಓಡಿ ಹೋಗಿದೆ. ಬಳಿಕ ರಾತ್ರಿ‌ 9.30 ಮತ್ತು 12 ಗಂಟೆ ಸಮಯದಲ್ಲೂ ಮತ್ತೆ ಎರಡು ಬಾರಿ ಚಿರತೆ ಮನೆ ಸುತ್ತಮುತ್ತ ಸುಳಿದಾಡುತ್ತಿತ್ತು. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ರೈತ ನಟರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net