

ಧಾರವಾಡ: ನಗರದ ವಿದ್ಯಾಗಿರಿ ಜೆ.ಎಸ್.ಎಸ್. ಕಾಲೇಜಿನ ಹಿಂಭಾಗದಲ್ಲಿರುವ ಹೊಂಡದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 7ರಂದು ಬೆಳಗ್ಗೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ಗುಗ್ಗಳವು ದೇವಸ್ಥಾನದಿಂದ ಹೊರಟು ತುರಮರಿಮಠ, ವಾಲ್ಮೀಕಿ ಓಣಿ, ಮಟ್ಟಿಪರಪ್ಪನ ಕೂಟ, ನಗರೇಶ್ವರ ದೇವಸ್ಥಾನ, ರವಿವಾರಪೇಟ, ಪಂಚಕಚೇರಿ ಓಣಿ, ಕಾಮನಕಟ್ಟಿ, ಹೊಸಯಲ್ಲಾಪೂರ ರಸ್ತೆ, ಕಲ್ಮೇಶ್ವರ ದೇವಸ್ಥಾನ ತಲುಪುವುದು. ಆಸಕ್ತ ಭಕ್ತರಿಗೆ ಉಚಿತವಾಗಿ ಗುಗ್ಗಳ ಮಾಡಿಕೊಳ್ಳಲು ಅವಕಾಶ ಇದೆ. ೮ರಂದು ಬೆಳಗ್ಗೆ 5 ಗಂಟೆಗೆ ರುದ್ರಾಭಿಷೇಕ, 12 ಗಂಟೆಗೆ ಅನ್ನ ಸಂತರ್ಪಣೆ, 4.30ಕ್ಕೆ ಶ್ರೀ ವೀರಭದ್ರೇಶ್ವರ ರಥೋತ್ಸವ ಜರುಗುವುದು.