ಹೆಲ್ಮೆಟ್‌ನಲ್ಲಿ ಸೇರಿಕೊಂಡಿದ್ದ ಬುಸ್‌ಬುಸ್ ನಾಗಪ್ಪ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಬಿಸಿಲಿನ ತಾಪ ತಾಳಲಾರದೆ ಹಾವೊಂದು ಮನೆಯ ಮುಂದಿಟ್ಟಿದ್ದ ಹೆಲ್ಮೆಟ್‌ನಲ್ಲಿ ಹಾವು ಸೇರಿಕೊಂಡಿದ್ದ ಘಟನೆ ಕೋಲಾರದಲ್ಲಿ ನಡೆದಿದೆ.

ನಗರದ ಕೀಲುಕೋಟೆ ಬಡಾವಣೆಯಲ್ಲಿ ವಾಸವಾಗಿರುವ ಪೋಟೋಗ್ರಾಫರ್ ಸ್ಪಂದನ ರಂಗನಾಥ್ ಅವರ ಮನೆಯ ಬಳಿ ಹೆಲ್ಮೆಟ್‌ನಲ್ಲಿ ಹಾವು ಸೇರಿಕೊಂಡಿದ್ದರಿAದ ಸುತ್ತಮುತ್ತಲಿನ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡಿತ್ತು, ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಜೀವಿ ಆನಂದ್ ಹೆಲ್ಮೆಟ್‌ನಲ್ಲಿ ಹಾವನ್ನು ಹೊರತೆಗೆದು ಬಾಟಲಿಯಲ್ಲಿ ಹಾಕಿ ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಹಾವನ್ನು ಬಿಟ್ಟರು.

ಉರಗ ರಕ್ಷಕ ಜೀವಿ ಆನಂದ್ ಮಾತನಾಡಿ, ಬಿಸಿಲಿನ ಬೇಗೆ ತಾಳಲಾರದೆ ಹಾವುಗಳು ಹೊರಗಡೆ ಬರುವುದು ಸಹಜವಾಗಿದ್ದು, ಸಾರ್ವಜನಿಕರು ಮನೆ ಸುತ್ತಮುತ್ತಲು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಚಿತ್ರ ೨೫ ಕೆ.ಎಲ್.ಆರ್. ೦೬ : ಕೋಲಾರದ ಕೀಲುಕೋಟೆಯ ಸ್ಪಂದನ ರಂಗನಾಥ್ ಹೆಲ್ಮೆಟ್‌ನಲ್ಲಿದ್ದ ಹಾವನ್ನು ಹಿಡಿಯುತ್ತಿರುವ ಉರಗ ರಕ್ಷಕ ಜೀವಿ ಆನಂದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net