ಹೆಬ್ಬಸೂರಿನಲ್ಲಿ ಮನೆ ಗೋಡೆ ಕುಸಿತ

21raju6 (2)ದ1
Published on


ಚಾಮರಾಜನಗರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮರಾಜನಗರ ತಾಲೂಕಿನ ಹೆಬ್ಬಸೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ವೃದ್ಧೆಯೊಬ್ಬರ ಬದುಕು ಬೀದಿಗೆ ಬಂದಿದೆ.


ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಹೊಸ ಬಡಾವಣೆಯ ನಿವಾಸಿ ಬಸಮ್ಮ ಮನೆ ಗೋಡೆ ಕುಸಿದಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಶಿಥಿಗೊಂಡ ಗೋಡೆ ನೆಲಕ್ಕೆ ಕುಸಿದಿದೆ. ಆಗ ಬಸಮ್ಮ ಮನೆಯೊಳಗೆ ಮಲಗಿದ್ದರು. ಗೋಡೆ ಹೊರಭಾಗಕ್ಕೆ ಬಿದ್ದಿದ್ದರಿಂದ ಜೀವಕ್ಕೆ ಅಪಾಯವಾಗಿಲ್ಲ. ಯಾರೂ ಇಲ್ಲದ ಬಸಮ್ಮನಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಅಮ್ಮನಪುರ ಮಲ್ಲೇಶ್ ನೆರವು: ತಾಲೂಕಿನ ಅಂಕನಶೆಟ್ಟಿಪುರದಲ್ಲಿ ಮಳೆಯಿಂದ ಮನೆಗಳು ಹಾನಿಯಾಗಿರುವ 10 ಸಂತ್ರಸ್ತರಿಗೆ ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ತಲಾ 5 ಸಾವಿರ ರೂ. ನೆರವು ನೀಡಿದರು.


ಅ.22ರಂದು ಜಿಲ್ಲಾ ಪ್ರವಾಸ ಕೈಗೊಂಡಿರುವ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚೆ ಮಾಡಿ ಹೆಚ್ಚಿನ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net