ಹೆಚ್ಚುವರಿ ಶುಲ್ಕ ೮ ಲಕ್ಷ ವಾಪಸ್‌ಗೆ ಆದೇಶ

kea
Published on

ಬೆಂಗಳೂರು: ವೈದ್ಯ ವಿದ್ಯಾರ್ಥಿ ಆರ್.ಕೆ.ಆದಿತ್ಯ ಎಂಬುವರಿಂದ (೨೦೨೨-೨೩ನೇ ಸಾಲಿನಲ್ಲಿ) ಪ್ರವೇಶ ಸಂದರ್ಭದಲ್ಲಿ ನಿಗಿದಿಗಿಂತ ಹೆಚ್ಚುವರಿಯಾಗಿ ೮ ಲಕ್ಷ ರೂ. ವಸೂಲಿ ಮಾಡಿದ್ದನ್ನು ಹಿಂದುರುಗಿಸುವಂತೆ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅವರು ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜಿಗೆ ಸೂಚನೆ ನೀಡಿದ್ದಾರೆ.

ದೂರುದಾರ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರನ್ನು ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದು, ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ೮ ಲಕ್ಷ ರೂಪಾಯಿ ಶುಲ್ಕ ಹಿಂದುರುಗಿಸಲು ಕಾಲೇಜು ಆಡಳಿತ ಮಂಡಲಿ ಒಪ್ಪಿದೆ ಎಂದು ಶ್ರೀನಿವಾಸ ಗೌಡ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net