ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ

10NGD1 (1)
Published on

ನಂಜನಗೂಡು: ತಾಲೂಕಿನ ಕೊರೆಹುಂಡಿ, ಹೆಗ್ಗಡಹಳ್ಳಿ, ಹುಲ್ಲಹಳ್ಳಿ, ಕುರುಹುಂಡಿ ಗ್ರಾಮಗಳ ಸರ್ಕಾರಿ ಶಾಲೆ ಆವರಣದಲ್ಲಿ ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಬಿ.ಹರ್ಷವರ್ಧನ್ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ಕೊಠಡಿ ಸಮಸ್ಯೆ ಎದುರಿಸುತ್ತಿರುವ ಶಾಲೆಗಳಲ್ಲಿ ನಬಾರ್ಡ್ ಯೋಜನೆಯಡಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಹೊರಳವಾಡಿ ಪಿ.ಮಹೇಶ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ, ನಗರಸಭಾ ಸದಸ್ಯರಾದ ಸಿದ್ದರಾಜು, ನಾಗಲಕ್ಷ್ಮಿ ಶಂಕರಪ್ಪ, ಮುಖಂಡರಾದ ಬಾಲಚಂದ್ರು, ಶಿರಮಳ್ಳಿ ಮಹದೇವಸ್ವಾಮಿ, ಮಧುರಾಜ್, ಧನರಾಜ್ ಬುಲಾ, ಬಾಗ್ಯ, ಶಶಿ ತಗಡೂರು ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net