ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ವರಮಹಾಲಕ್ಷಿö್ಮÃ, ಗೌರಿ-ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗಿದ್ದ ಹೂವಿನ ಬೆಲೆ ಕಳೆದ ೩ ದಿನಗಳಿಂದ ದಿಢೀರನೆ ಕುಸಿದಿದ್ದು, ಸೇವಂತಿಗೆ ಪ್ರತಿ ಕೆ.ಜಿ.ಗೆ ೨೦ ರಿಂದ ೫೦ ರೂ.ಗಳಿಗೆ ಮಾರಾಟವಾಗುತ್ತಿದೆ. ಚೆಂಡು ಹೂವು ಕೇಳುವವರೇ ಇಲ್ಲ. ೫೦ ಕೆ.ಜಿ.ಮೂಟೆ ೧೦೦ ರಿಂದ ೧೫೦ ರೂ.ಗಳಿಗೆ ಮಾರಾಟವಾಗುತ್ತಿದೆ. ಹೂವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ ಮಿಲ್ಕ್ ಮತ್ತು ಸಿಲ್ಕ್ ಎಂಬ ಹೆಗ್ಗಳಿಕೆಗೆ ಹೆಸರಾಗಿದ್ದು, ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ರೈತರು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ದಿನೇ ದಿನೇ ರೇಷ್ಮೆ ಕೃಷಿ ಕಡಿಮೆಯಾಗುತ್ತಿದ್ದಂತೆ ಟೊಮೆಟೋ ಬೆಳೆಯಲು ರೈತರು ಮುಂದಾದರು. ರೇಷ್ಮೆ ಕೃಷಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ರೈತರು ಹಿಪ್ಪುನೇರಳೆ ತೋಟಗಳನ್ನು ನಾಶಪಡಿಸಿರುವ ಕಾರಣ ಟೊಮೆಟೋ ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ.
ಇತ್ತೀಚೆಗೆ ಕೆ.ಸಿ.ವ್ಯಾಲಿ ನೀರಿನಿಂದ ಅಂತರ್ಜಲ ವೃದ್ಧಿಯಾದ ನಂತರ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿರುವುದರಿಂದ ತರಕಾರಿ ಬೆಳೆಗಳ ಜೊತೆಗೆ ಹೂವು ಬೆಳೆಯಲು ಮುಂದಾಗಿದ್ದಾರೆ. ಶೇ.೩೦ ರಿಂದ ೩೫ ರಷ್ಟು ರೈತರು ಹೂವನ್ನು ಬೆಳೆಯುತ್ತಿದ್ದಾರೆ. ಸೇವಂತಿಗೆ ವಿವಿಧ ತಳಿಗಳು ಸೇರಿದಂತೆ ಚೆಂಡುಹೂವು, ಬಟನ್ ರೋಜ್ ಸೇರಿದಂತೆ ವಿವಿಧ ರೀತಿಯ ಹೂವುಗಳನ್ನು ಬೆಳೆಯುತ್ತಿದ್ದಾರೆ.
ಹಬ್ಬಹರಿದಿನಗಳನ್ನು ಬಿಟ್ಟರೆ ಬೇರೆ ದಿನಗಳಲ್ಲಿ ಹೂವಿಗೆ ಅಷ್ಟೊಂದು ಬೇಡಿಕೆಯು ಇರುವುದಿಲ್ಲ. ಪಕ್ಕದ ಆಂಧ್ರ ಪ್ರದೇಶ ಮತ್ತು ತಮಿಳುನಾಡಿಗೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಹೂವು ರಫ್ತಾಗುತ್ತಿದೆ. ಹೂವಿನ ಬೆಲೆ ಕುಸಿತ ಸಂದರ್ಭದಲ್ಲಿ ಹೂವನ್ನು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಇಟ್ಟು ಬೆಲೆ ಏರಿಕೆಯಾದರೆ ಮಾರಾಟ ಮಾಡಲು ಜಿಲ್ಲೆಯಲ್ಲಿ ಯಾವುದೇ ಕೋಲ್ಡ್ ಸ್ಟೋರೇಜ್ ಇಲ್ಲದೇ ಇರುವುದರಿಂದ ಬೆಲೆ ಇಲ್ಲದ ಸಂದರ್ಭದಲ್ಲಿ ಹೂವನ್ನು ರಸ್ತೆಗಳಿಗೆ ಸುರಿಯಬೇಕಾದ ಸಂದರ್ಭಗಳು ರೈತರಿಗೆ ಎದುರಾಗುತ್ತಿವೆ.
ವರಮಹಾಲಕ್ಷಿö್ಮÃ ಹಬ್ಬ ಮತ್ತು ಗೌರಿ-ಗಣೇಶ ಚುತುರ್ಥಿ ಹಬ್ಬದ ಸಂದರ್ಭದಲ್ಲಿ ಸೇವಂತಿಗೆ ಮತ್ತು ಬಟನ್ ರೋಜ್ ೩೫೦ ರಿಂದ ೪೫೦ ರೂ.ಗಳ ತನಕ ಮಾರಾಟವಾಗುತ್ತಿತ್ತು. ಕಳೆದ ೩ ದಿನಗಳಿಂದ ಸೇವಂತಿಗೆ ೨೦ ರೂ.ಗಳಿಂದ ೫೦ ರೂ.ಗಳ ತನಕ ಮಾರಾಟವಾಗುತ್ತಿದೆ. ಮುಸ್ಕಿನ್ ವೈಟ್ ಎಂಬ ತಳಿಯ ಬಿಳಿ ಸೇವಂತಿಗೆ ಹಬ್ಬದ ಸಂದರ್ಭದಲ್ಲಿ ೪೦೦ ರಿಂದ ೬೦೦ ರೂ.ಗಳ ತನಕ ಮಾರಾಟವಾಗುತ್ತಿದ್ದ ಹೂವು ಕಳೆದ ೩ ದಿನಗಳಿಂದ ೧೦೦ ರಿಂದ ೧೫೦ ರೂ.ಗಳಿಗೆ ಮಾರಾಟವಾಗುತ್ತಿದೆ. ಇದರಿಂದ ಹೂವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ತೋಟದಿಂದ ಕೊಯ್ದು ಮಾರುಕಟ್ಟೆಗೆ ಸಾಗಿಸುವ ಖರ್ಚು ಬಾರದೆ ಆಗಿದ್ದು, ತೋಟಗಳಲ್ಲಿಯೇ ಹೂವು ಕೊಳೆಯುವಂತೆ ಆಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಚೆಂಡು ಹೂವನ್ನು ಕೇಳುವವರೇ ಇಲ್ಲದಂತೆ ಆಗಿದ್ದು, ಗುಣಮಟ್ಟ ಇರುವ ಹೂವನ್ನು ಮಾತ್ರ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಗುಣಮಟ್ಟ ಇಲ್ಲದ ಹೂವನ್ನು ವಾಪಸ್ಸು ಕಳುಹಿಸುತ್ತಿದ್ದಾರೆ. ಚೆಂಡು ಹೂವು ಬೆಳೆದ ಬೆಳೆಗಾರರು ಹೂವನ್ನು ಮಾರುಕಟ್ಟೆಗೆ ತರದೆ ತೋಟಗಳಲ್ಲಿಯೇ ಬಿಟ್ಟಿದ್ದಾರೆ. ಹೂವು ಕಟಾವು ಮಾಡುವ ಕೂಲಿ ಬಾರದೆ ಇರುವ ಕಾರಣ ತೋಟಗಳಲ್ಲಿಯೇ ಹೂವು ಕೊಳೆಯುವಂತಾಗಿದೆ.
ಕೋಟ್
ಒಂದೂವರೆ ಎಕೆರೆ ತೋಟದಲ್ಲಿ ಮುಸ್ಕಿನ್ ವೈಟ್ ಎಂಬ ತಳಿಯ ಬಿಳಿ ಸೇವಂತಿಗೆಯನ್ನು ಬೆಳೆಯಲಾಗಿದೆ. ಸುಮಾರು ೪.೫ ಲಕ್ಷ ರೂ.ಗಳು ಖರ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ ದಿಢೀರನೆ ಬೆಲೆ ಕುಸಿದಿದೆ. ಹಬ್ಬದ ದಿನಗಳ ಸಂದರ್ಭದಲ್ಲಿ ಒಂದು ವಾರ ಮಾತ್ರ ಉತ್ತಮ ಬೆಲೆ ಇತ್ತು. ಈಗ ಬೆಲೆ ಇಲ್ಲ. ಒಂದು ಕೆ.ಜಿ.ಹೂವು ಮಾರುಕಟ್ಟೆಗೆ ಸೇರಲು ೧೫ ರಿಂದ ೨೦ ರೂ.ಗಳ ಖರ್ಚು ಬರುತ್ತದೆ. ಒಂದು ಕೂಲಿ ಆಳು ೩೦ ಕೆ.ಜಿ.ಹೂವನ್ನು ಕಟಾವು ಮಾಡುತ್ತಾರೆ. ಅವರಿಗೆ ೪೦೦ ರೂ.ಗಳ ಕೂಲಿ ನೀಡಬೇಕು. ಮಾರುಕಟ್ಟೆಯ ಕಮೀಷನ್ ಸೇರಿದಂತೆ ಹೂವು ಬಿಡಿಸಿದ ಕೂಲಿಯೂ ಸಿಗದಂತೆ ಆಗಿದೆ. ಜಿಲ್ಲೆಯಲ್ಲಿ ಯಾವುದೇ ಕೋಲ್ಡ್ ಸ್ಟೋರೇಜ್‌ಗಳು ಇಲ್ಲ. ಕಟಾವಿಗೆ ಬಂದ ಹೂವನ್ನು ತೋಟಗಳಲ್ಲಿಯೇ ಬಿಟ್ಟಿರುವುದರಿಂದ ಉದುರಿಹೋಗುತ್ತಿವೆ.
-ಕೃಷ್ಣೇಗೌಡ, ಹೂವು ಬೆಳೆಗಾರ, ಬುಸನಹಳ್ಳಿ, ಕೋಲಾರ ತಾಲ್ಲೂಕು.
ಚಿತ್ರ ೦೬ ಕೆ.ಎಲ್.ಆರ್. ೦೨ : ಹೂವಿಗೆ ಬೆಲೆ ಇಲ್ಲದ ಕಾರಣ ತೋಟಗಳಲ್ಲಿ ಬಿಡಿಸದೆ ಇರುವ ಮುಸ್ಕಿನ್‌ವೈಟ್ ಎಂಬ ತಳಿಯ ಬಿಳಿ ಸೇವಂತಿಗೆ.
ಚಿತ್ರ ೦೬ ಕೆ.ಎಲ್.ಆರ್. ೦೨ಎ : ಸೇವಂತಿಗೆ ಹೂವು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ಕೊಳ್ಳುವವರು ಇಲ್ಲದೆ ರಾಶಿ ಹಾಕಿರುವುದು.
ಚಿತ್ರ ೦೬ ಕೆ.ಎಲ್.ಆರ್. ೦೨ಬಿ : ಕೃಷ್ಣೇಗೌಡ, ಹೂವು ಬೆಳೆಗಾರ, ಬುಸನಹಳ್ಳಿ, ಕೋಲಾರ ತಾಲ್ಲೂಕು ರವರ ಭಾವಚಿತ್ರ