

ಮೈಸೂರಿನಲ್ಲಿ ಸಾಮಾನ್ಯವಾಗಿ ಹಬ್ಬಗಳು ಬಂತೆಂದರೆ ಹೂವಿನ ದರ ಗಗನಕ್ಕೇರುತ್ತದೆ. ಆದರೆ, ದೀಪಾವಳಿಗೆ ಹೆಚ್ಚಾಗಿ ಹೂವನ್ನು ಬಳಸದಿರುವುದರಿಂದ ದರ ಹೆಚ್ಚು ಏರಿಕೆಯಾಗಿಲ್ಲ. ಸೇವಂತಿಗೆ ಒಂದು ಮಾರಿಗೆ 50-80 ರೂ, ಚಂಡು ಹೂ ಕೆಜಿಗೆ 40, ಕನಕಾಂಬರ ಮಾರಿಗೆ 150, ಕಾಕಡ 50 ರೂ, ಮಲ್ಲಿಗೆ 150 ರೂ, ಗುಲಾಬಿ ಕೆಜಿಗೆ 200 ರೂ, ತಾವರೆ 2ಕ್ಕೆ50 ರೂಗೆ ಮಾರಾಟವಾಯಿತು. ತರಕಾರಿ ದರವೂ ಏರಿಕೆಯಾಗಿರಲಿಲ್ಲ. ತೆಂಗಿನಕಾಯಿ 30-40 ರೂ, ಬೀನ್ಸ್ 60, ಕ್ಯಾರೆಟ್ 40, ಬೀಟ್ರೋಟ್ 40, ಬದನೆಕಾಯಿ 40, ಕೋಸು 20, ಕ್ಯಾಪ್ಸಿಕಂ 60, ನುಗ್ಗೆ 100 ರಿಂದ120, ಹುಳಿ ಟೊಮೆಟೊ 30 ರೂಗೆ ಮಾರಾಟವಾಯಿತು.