ಗುಂಡ್ಲುಪೇಟೆ: ತಾಲೂಕಿನ ಶ್ರೀಕಂಠಪುರ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಹಾಗೂ ಜಿಂಕೆ ಬಲಿಯಾಗಿದೆ.
ಮೇವನ್ನು ಅರಸಿ ಗ್ರಾಮದತ್ತ ಬಂದಿದ್ದ ಜಿಂಕೆಯನ್ನು ಬೇಟೆಯಾಡಿರುವ ಹುಲಿ ನಂತರ ಗ್ರಾಮದ ರಾಜಪ್ಪ ಎಂಬುವರ ಹಸುವಿನ ಮೇಲೂ ದಾಳಿ ಮಾಡಿದೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಸು ಕಳೆದುಕೊಂಡ ರೈತ ರಾಜಪ್ಪ ಕಂಗಾಲಾಗಿದ್ದಾರೆ.