ಹುಬ್ಬಳ್ಳಿಯ ರಸ್ತೆಗಳು ಅಯೋಮಯ

Published on

ಹುಬ್ಬಳ್ಳಿಯ ರಸ್ತೆಗಳು ಮಳೆ ನಿಂತು ಹೋದ ಮೇಲೆ ಅಯೋಮಯವಾಗಿವೆ. ಈ ಮೊದಲೇ ಇದ್ದ ಚಿಕ್ಕ ಪುಟ್ಟ ತೆಗ್ಗು ಹೊಂಡಗಳು ಈಗ ದೊಡ್ಡದಾಗಿ ವಾಹನ ಸವಾರರನ್ನು ಅಣಕಿಸುತ್ತಿವೆ. ಅದ್ಹೇಗೆ ಸ್ಪೀಡಾಗಿ ಹೋಗ್ತೀರಾ ನೋಡ್ತೀನಿ ಎಂದು ಪ್ರತಿ ಹೆಜ್ಜೆಗೂ ಕಾದು ಕುಳಿತಿವೆ. ಎರಡು ವಾರದಿಂದ ಬಿಟ್ಟೂ ಬಿಡದೆ ಸುರಿದ ಮಳೆ ಹುಬ್ಬಳ್ಳಿಯ ರಸ್ತೆಗಳ ಅಸಲಿ ಬಣ್ಣ ಬಯಲು ಮಾಡಿದೆ. ಈಗಾಗಲೇ ರಸ್ತೆ ಕಾಮಗಾರಿ ನಡೆದಿರುವ ಕಡೆಗಳಲ್ಲಿ ಸಹ ಅರ್ಧಂಬರ್ಧ ಕೆಲಸದಿಂದಾಗಿ ಓಡಾಡಲು ಬಾರದಂತಾಗಿವೆ. ಇನ್ಮು ಮಳೆ ಶುರುವಾಗುತ್ತಿದ್ದಂತೆ ಅಗೆದು ಕೈಬಿಟ್ಟಿರುವ ರಸ್ತೆಗಳು ಹೊಂಡಗಳಾಗಿ ಪರಿಣಮಿಸಿವೆ. ಹಾಗಾಗಿ ವಾಹನ ಸವಾರರು ಮಾತ್ತವಲ್ಲ ಪಾದಚಾರಿಗಳು ಕೂಡಾ ನಡೆದಾಡಲು ರಸ್ತೆಗಳು ಯೋಗ್ಯವಾಗಿಲ್ಲ ಎಂದು ಜನ ಆಕ್ರೋಶದಿಂದ ಹೇಳುತ್ತಾರೆ. ಮಹಾನಗರ ಪಾಲಿಕೆ ಹಾಗೂ ಹೆದ್ದಾರಿ ವಿಭಾಗ ಸೇರಿ ಸಂಬಂಧಪಟ್ಟ ಇಲಾಖೆಯವರು ರಸ್ತೆ ಸುಧಾರಣೆಗೆ ಗಮನ ಹರಿಸಬೇಕು. ತಕ್ಷಣಕ್ಕೆ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಬೇಕು ಎಂಬುದು ಜನರ ಒತ್ತಾಯ. ಉಣಕಲ್ಲ ಸಾಯಿನಗರದಿಂದ ಶ್ರೀನಗರ ವರೆಗಿನ ರಸ್ತೆ ಅಗೆದು ಕೈ ಬಿಟ್ಟಿರುವುದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಳೇಹುಬ್ಬಳ್ಳಿ. ಇಂಡಿಪಂಪ್. ಆನಂದನಗರ. ಗೋಕುಲ ರಸ್ತೆಯ ಅಕ್ಕಪಕ್ಕದ ಹಲವು ಬಡಾವಣೆಗಳಲ್ಲಿ ರಸ್ತೆಗಳು ಹದಗೆಟ್ಟು ಹೋಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net