ಹಿಂದುಗಳಲ್ಲಿ ಸಾಮರಸ್ಯ ಮೂಡಲಿ

dvg-hindu-ganapati.jpg
Published on

ಹಿಂದುಗಳ ಭಾವನೆಗಳೆಲ್ಲ ಒಂದಾಗಬೇಕು. ಅದಕ್ಕಾಗಿ ಸಮಾಜದಲ್ಲಿ ಸಾಮರಸ್ಯ ಮೂಡಬೇಕಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.

ಸಮಾಜದಲ್ಲಿ ಸಾಮರಸ್ಯ ಕಾಪಾಡಲು ವಿಶ್ವ ಹಿಂದು ಪರಿಷತ್ ಮೈಸೂರು ಘಟಕದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಸಾಮಾಜಿಕ ಸಾಮರಸತಾ ರಥಯಾತ್ರೆಗೆ ಭಾನುವಾರ ಚಾಮುಂಡಿಬೆಟ್ಟದ ಪಾದದ ಬಳಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ವಿಶ್ವಹಿಂದು ಪರಿಷತ್ ವತಿಯಿಂದ ಸಾಮರಸ್ಯ ರಥಯಾತ್ರೆ ಹಮ್ಮಿಕೊಂಡಿರುವುದು ಅರ್ಥಪೂರ್ಣ. ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವ ಮೂಡಲು ಮೊದಲು ಮೇಲು, ಕೀಳು, ಅಸ್ಪೃಶ್ಯತೆ ದೂರವಾಗಬೇಕಿದೆ. ಈ ನಿಟ್ಟಿನಲ್ಲಿ ಐಕ್ಯ ಭಾವ ಮೂಡಿಸುವ ಕಾರ್ಯಕ್ರಮ ಅಗತ್ಯ ಎಂದರು.

ವಿಎಚ್‌ಪಿ ಮೈಸೂರು ಜಿಲ್ಲಾಧ್ಯಕ್ಷ ಮಹೇಶ್ ಕಾಮತ್ ಮಾತನಾಡಿ, ಚಾಮುಂಡಿ ಬೆಟ್ಟದ ಪಾದದಿಂದ ಆರಂಭವಾದ ರಥಯಾತ್ರೆ ವಿದ್ಯಾರಣ್ಯಪುರ ಸ್ಲಂ, ಜೆ.ಪಿ ನಗರ, ಅಶೋಕಪುರಂ, ಕುದುರೆ ಮಾಳ, ಭೋವಿಪಾಳ್ಯ ಮೂಲಕ ಸಾಗಿ ಸಂಜೆ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅಂತ್ಯಗೊಳಿಸಲಾಗುವುದು ಎಂದು ತಿಳಿಸಿದರು.

ಡಿ.16ರಂದು ಮತ್ತೆ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಹೊರಟು ಕುರಬಾರಹಳ್ಳಿ, ಗಾಂಧಿನಗರ, ಹೈವೇ ವೃತ್ತ, ಮಂಜುನಾಥಪುರ ಸ್ಲಂ, ಮೇಟಗಳ್ಳಿ, ಬೆಲವತ್ತದಿಂದ ಚಾಮರಾಜನಗರಕ್ಕೆ ತೆರಳಿಲಿದೆ ಎಂದು ಮಾಹಿತಿ ನೀಡಿದರು.

ಶಿವಾನಂದ ಆಶ್ರಮದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾಮರಸತಾ ರಥಯಾತ್ರೆಗೆ ಚಾಲನೆ ನೀಡಿದರು. ವಿಶ್ವ ಹಿಂದು ಪರಿಷತ್ ಮೈಸೂರು ಕಾರ್ಯದರ್ಶಿ ಎಂ.ಪಿ.ಮಧುಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net