ಹಿಂದು ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರ; ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅಭಿಮತ, ರುದ್ರ, ಚಂಡಿಕಾ ಹೋಮಗಳ ಪೂರ್ಣಾಹುತಿಯಲ್ಲಿ ಭಾಗಿ

8 svpura kumbabisheka
Published on

ಶ್ರೀನಿವಾಸಪುರ: ಸನಾತನ ಹಿಂದು ಧರ್ಮದ ಏಳಿಗೆಗಾಗಿ ಆದಿ ಶಂಕರಾಚಾರ್ಯರು ನೀಡಿದ ಕೊಡುಗೆ ಅಪಾರ. ನಮಗಾಗಿ ಅವರು ಶ್ರಮಿಸಿ ಉಳಿಸಿಕೊಟ್ಟ ಧರ್ಮವನ್ನು ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ ಎಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶೃಂಗೇರಿ ಶಂಕರಮಠದ ಶತಮಾನೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ವಿಮಾನ ಗೋಪುರದ ಕುಂಭಾಭಿಷೇಕ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಶಂಕರಾಚಾರ್ಯರು 32ನೇ ವಯಸ್ಸಿಗೆ ದೇಶಾದ್ಯಂತ ಸುತ್ತಿ ಚತುರಾಮ್ನಾಯ ಮಠಗಳನ್ನು ಸ್ಥಾಪಿಸಿ, ಮುಖ್ಯವಾಗಿ ಶೃಂಗೇರಿ ಶಾರದ ಶಂಕರಮಠವನ್ನು ಸ್ಥಾಪಿಸಿದರು. ಈ ಹಿನ್ನೆಲೆ ಹಿಂದು ಧರ್ಮವನ್ನು ಉಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ದುಡಿಯಬೇಕು ಎಂದರು.

ಶಂಕರ ಮಠದಲ್ಲಿನ ಮೂಲವಿಗ್ರಹಗಳಾದ ಗುರುದತ್ತಾತ್ರೇಯ, ಆದಿ ಶಂಕರಾಚಾರ್ಯರಿಗೆ ಗಾಯತ್ರಿ ಪೂಜೆ, ಅರ್ಚನೆ, ಮಹಾಮಂಗಳಾರತಿ ಮಾಡಿದರು. ಲೋಕ ಕಲ್ಯಾಣಾರ್ಥವಾಗಿ ರುದ್ರ ಹೋಮ ಹಾಗೂ ಚಂಡಿಕ ಹೋಮಗಳಲ್ಲಿ ಪಾಲ್ಗೊಂಡು ಪೂರ್ಣಾಹುತಿ, ನಂತರ ವಿಮಾನಗೋಪುರ ಕುಂಭಾಭಿಷೇಕ ನೆರವೇರಿಸಿಕೊಟ್ಟರು.

ಶ್ರೀನಿವಾಸಪುರ ಶಂಕರಮಠ ನಡೆದ ಬಂದ ದಾರಿಯ ಬಗ್ಗೆ ಕಿರುಹೊತ್ತಿಗೆ ಪುಸ್ತಕವನ್ನು ಶ್ರೀಗಳು ಬಿಡುಗಡೆ ಮಾಡಿದರು.

ಆಡಳಿತ ಅಧಿಕಾರಿ ಗೌರಿಶಂಕರ್​, ಶಾಖಾ ಪ್ರಮುಖ್​ ನರೇಶ್​ಸೋಮಾಜಿ, ಸಮುದಾಯದ ಹಿರಿಯ ಮುಖಂಡ ಅಡ್ಡಗಲ್​ ಕೃಷ್ಣಮೂರ್ತಿ, ಪಿಎಲ್​ಡಿ ಬ್ಯಾಂಕ್​ ತಾಲೂಕು ಅಧ್ಯಕ್ಷ ದಿಂಬಾಲ್​ ಅಶೋಕ್​, ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್​, ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ದಿವಾಕರ್​, ಮಠದ ವ್ಯವಸ್ಥಾಪಕ ಡಿ.ಎಸ್​.ಶ್ರೀನಿವಾಸ್​, ಮುಖಂಡರಾದ ಜೆ.ಕೆ.ಮಂಜುನಾಥ್​, ಗೋಪಿನಾಥರಾವ್​, ಸತೀಶ್​, ಕೃಷ್ಣ, ಅರುಣ್​, ಕಾಣಿಪಾಕಂ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್​, ಪಿಎಲ್​ಡಿ ಬ್ಯಾಂಕ್​ ನಿವೃತ್ತ ವ್ಯವಸ್ಥಾಪಕ ಸತೀಶ್​, ಮಹಿಳಾ ಮಂಡಳದ ಸದಸ್ಯರು ಹಾಗೂ ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net