ಹಿಂದು ಧರ್ಮ ರಕ್ಷಣೆಗಾಗಿ ಹೋರಾಟ

5 nrp 1 protest
Published on

ಎನ್.ಆರ್.ಪುರ: ಹಿಂದು ಧರ್ಮದ ರಕ್ಷಣೆಗಾಗಿ ದೇಹದಲ್ಲಿ ಒಂದು ಹನಿ ರಕ್ತ ಇರುವವರೆಗೂ ಹೋರಾಟ ಮಾಡುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ತಿಳಿಸಿದರು.

ವಿಶ್ವ ಹಿಂದು ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಮಂಗಳೂರಿನ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ವಿರೋಧಿಸಿ ಬಂದ್ ಕರೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಪಹಾಲ್ಗಾಮ್‌ನಲ್ಲಿ ಹಿಂದುಗಳ ಹತ್ಯೆಯನ್ನು ಕಾಂಗ್ರೆಸ್‌ನವರು ಭದ್ರತಾ ಲೋಪ ಎನ್ನುತ್ತಾರೆ. ಈಗ ಮಂಗಳೂರಿನಲ್ಲಿ ಭದ್ರತಾ ಲೋಪ ಆಗಿಲ್ಲವೆ ಎಂದು ಪ್ರಶ್ನಿಸಿದರು.

ವಿಶ್ವ ಹಿಂದು ಪರಿಷತ್ ಮುಖಂಡ ಮೂಡಬಾಗಿಲು ಸಚಿನ್, ತಾಲೂಕು ಅಧ್ಯಕ್ಷ ಕೋಣನಕೆರೆ ಸತ್ಯನಾರಾಯಣ, ಜಿಲ್ಲಾ ಸಹ ಕಾರ್ಯದರ್ಶಿ ಮದನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಡಿಗೇಶ್ವರ ಅಭಿಷೇಕ್, ಅರುಣಕುಮಾರ್ ಜೈನ್, ನೀಲೇಶ್, ತಾಲೂಕು ಪ್ರೀತಂ, ಸುರಭಿ ರಾಜೇಂದ್ರ, ಎನ್.ಎಂ.ಕಾಂತರಾಜ್, ಅರುಣಕುಮಾರ್, ಆಶೀಶ್ ಕುಮಾರ್, ಕೆಸವಿ ಮಂಜುನಾಥ್, ಮಂಜುನಾಥ್ ಲಾಡ್, ಎ.ಬಿ.ಮಂಜುನಾಥ್, ಎನ್.ಡಿ.ಪ್ರಸಾದ್, ಎಚ್.ಡಿ.ಲೋಕೇಶ್, ಶ್ರೀನಾಥ್, ಕೈಮರ ರಾಜೇಂದ್ರ ಕುಮಾರ್, ಅಶ್ವನ್, ನಾ.ಮ.ನಾಗೇಶ್, ಅವಿನಾಶ್, ಪ್ರಸನ್ನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net