‘ಹಾಸ್ಯರತ್ನ ರತ್ನಾಕರ ಸ್ಮರಣಾರ್ಥ ಪ್ರಶಸ್ತಿ’ ಪ್ರದಾನ

2
Published on

ಕರ್ನಾಟಕ ಕಾವಲು ಪಡೆ ವತಿಯಿಂದ ‘ಹಾಸ್ಯರತ್ನ ರತ್ನಾಕರ ಸ್ಮರಣಾರ್ಥ ಪ್ರಶಸ್ತಿ’ ರಂಗಭೂಮಿ ಕಲಾವಿದೆ ಪಾರ್ವತಿ ಲೋಕೇಶ್ ಅವರಿಗೆ ಪ್ರದಾನ ಮಾಡಲಾಯಿತು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಹಾಸ್ಯನಟ ರತ್ನಾಕರ ಅವರು ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಕಲೆಯನ್ನು ತಪಸ್ಸಿನ ರೀತಿ ಆಚರಿಸಿದರು. ಅವರ ಅಭಿನಯ, ಸಾಹಿತ್ಯ ಮತ್ತು ಹಾಡುಗಾರಿಕೆ ವಿಸ್ಮಯಕಾರಿ ಯಾಗಿತ್ತು ಎಂದರು.

ಭರತನಾಟ್ಯ ಗುರು ಶ್ರೀಧರ್ ಜೈನ್ ಮಾತನಾಡಿ, ಹಾಸ್ಯನಟ ರತ್ನಾಕರ ಅವರು ಸಿನಿಮಾಗಳಲ್ಲಿ ತಲ್ಲೀನತೆಯಿಂದ ಅಭಿನಯಿಸುತ್ತಿದ್ದರು. ಅವರ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ ಮುಖ ನೋಡುತ್ತಾ ಕುಳಿತಿರುತ್ತಾರೆ. ಅಲ್ಲೇ ಸಮಯ ಕಳೆಯುತ್ತಾರೆ. ಇದರ ಬದಲಿಗೆ ತಮ್ಮ ಕುಟುಂಬ ಮತ್ತು ಬಂದು ಬಳಗದವರ ಮುಖ ನೋಡಬೇಕು. ಅಂದರೆ ಕುಟುಂಬಕ್ಕೆ ಸಮಯ ಕೊಡಬೇಕು ಎಂದು ತಿಳಿಸಿದರು.

ಕಲಾವಿದ ಎನ್.ವಿ. ರಮೇಶ್, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್‌ಗೌಡ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಹಾಸ್ಯ ನಟ ರತ್ನಾಕರ್ ಅವರ ಪುತ್ರ ರಾಘವೇಂದ್ರ ರತ್ನಾಕರ್, ನಟರಾದ ಜೈ ಪ್ರಕಾಶ್, ನಾ. ನಾಗಚಂದ್ರ, ನಿರ್ಮಾಪಕ ಪಾರ್ಥಸಾರಥಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net