ಹಸು ಕೊಂದು ಮೇಕೆ ಹೊತ್ತೊಯ್ದ ಹುಲಿ

Published on

ಹನಗೋಡು: ನಾಗರಹೊಳೆ ಉದ್ಯಾನದಂಚಿನ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದೆ. ಅಲ್ಲದೆ ಮೇಕೆಯೊಂದನ್ನು ಹೊತ್ತೊಯ್ದಿದೆ.
ಹನಗೋಡು ಹೋಬಳಿಯ ಅಬ್ಬೂರು ಗ್ರಾಮದ ತಿಮ್ಮೇಗೌಡ ಎಂಬುವರು ಬುಧವಾರ ಶೆಟ್ಟಹಳ್ಳಿಯ ಕಾಡಂಚಿನಲ್ಲಿರುವ ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಕೊಂದು ಹಾಕಿದೆ. ಪಕ್ಕದಲ್ಲೇ ಮೇಯುತ್ತಿದ್ದ ಮೇಕೆಯನ್ನು ಹೊತ್ತೊಯ್ದಿದೆ.


ಘಟನಾ ಸ್ಥಳಕ್ಕೆ ಹುಣಸೂರು ವಲಯದ ಡಿಆರ್‌ಎಫ್‌ಒ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಇಲಾಖೆಯಿಂದ ಸಿಗುವ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು. ವಾರದ ಹಿಂದಷ್ಟೇ ಗೌಡಿಕೆರೆ ಗ್ರಾಮದ ಶೇಖರ್ ಎಂಬುವರ ಹಸುವನ್ನು ಕೊಂದು ಹಾಕಿತ್ತು. ಮೂರು ದಿನಗಳ ಹಿಂದೆ ಸಮೀಪದ ಬೀರತಮ್ಮನಹಳ್ಳಿಯಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net