ಹಸಿರುಕ್ರಾಂತಿಯಿಂದ ದೇಶ ಆಹಾರ ಕ್ಷೇತ್ರದಲ್ಲಿ ಸುಭಿಕ್ಷ

6MDG1 babu
ಮೂಡಿಗೆರೆ ತಾಪಂನಲ್ಲಿ ಡಾ. ಬಾಬು ಜಗಜೀವನರಾಮ್ ಜನ್ಮದಿನ ಆಚರಿಸಲಾಯಿತು. ದಯಾವತಿ, ಬಿ.ಆರ್.ಬಾಲಕೃಷ್ಣ, ಅಣ್ಣೇಗೌಡ, ಮಂಜುನಾಥ್ ಬೆಟ್ಟಗೆರೆ, ಲೋಕವಳ್ಳಿ ರಮೇಶ್, ಮಂಜುನಾಥ್, ಕಮಲಾಕ್ಷಮ್ಮ, ಶಂಕರ್ ಬೆಟ್ಟಗೆರೆ, ಸೀತಮ್ಮ, ಪಿ.ಕೆ.ಮಂಜುನಾಥ್, ರವಿ ಕುನ್ನಳ್ಳಿ ಶಾಂತಕುಮಾರ್, ಸೋಮಶೇಖರ್ ಇತರರಿದ್ದರು.
Published on

ಮೂಡಿಗೆರೆ: ಮಾಜಿ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಕೃಷಿ ಸಚಿವರಾಗಿದ್ದಾಗ ಕೈಗೊಂಡ ಹಸಿರು ಕ್ರಾಂತಿಯಿಂದಾಗಿ ದೇಶ ಈಗ ಆಹಾರ ಉತ್ಪಾದನೆಯಲ್ಲಿ ಸುಭಿಕ್ಷವಾಗಿದೆ ಎಂದು ಕುಂದೂರು ಪಿಡಿಒ ವಾಸುದೇವ್ ತಿಳಿಸಿದರು.

ಮೂಡಿಗೆರೆ ತಾಪಂ ಕಚೇರಿಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವಬನರಾಮ್ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಬಾಬು ಜಗಜೀವಮರಾಮ್ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಿರ್ಮೂಲವಾಗಬೇಕೆಂಬ ಕನಸು ಕಂಡಿದ್ದರು. ಅಸ್ಪಷ್ಯತೆ ನಿವಾರಣೆಯಲ್ಲಿ ತೊಡಗಿದ್ದಲ್ಲದೆ ಇತರರಿಗೂ ಪ್ರೇರಣೆ ನೀಡಿದ್ದರು. ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಮಾಡಿದ್ದರು ಎಂದು ತಿಳಿಸಿದರು.

ತಹಸೀಲ್ದಾರ್ ರಾಜಶೇಖರಮೂರ್ತಿ ಮಾತನಾಡಿ, ಬಡತನದಲ್ಲಿ ಜನಿಸಿದರೂ ಉತ್ತಮ ಶಿಕ್ಷಣ ಪಡೆದ ಡಾ. ಬಾಬು ಜಗಜೀವನರಾಮ್ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಹುದ್ದೆಗಳ ಘನತೆ ಕಾಪಾಡಿಕೊಂಡಿದ್ದರು. ಜಾತಿ ಪದ್ಧತಿ ವಿರೋಧಿಸಿದ ಇವರು ಮಾನವರೆಲ್ಲರೂ ಸಮಾನರೆಂಬ ಸಿದ್ಧಾಂತ ಪ್ರತಿಪಾದಿಸಿದರು ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸ್ಕೆರೆ ರಮೇಶ್ ಮಾತನಾಡಿ, ಮಹನೀಯರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.

ತಾಪಂ ಇಒ ದಯಾವತಿ, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ದೌರ್ಜನ್ಯ ತಡೆ ಸಮಿತಿ ಸದಸ್ಯಅಣ್ಣೇಗೌಡ, ತಾಲೂಕು ಛಲವಾದಿ ಮಹಾಸಭಾ ಘಟಕದ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ಲೋಕವಳ್ಳಿ ರಮೇಶ್, ಮಂಜುನಾಥ್, ಕಮಲಾಕ್ಷಮ್ಮ, ಶಂಕರ್ ಬೆಟ್ಟಗೆರೆ, ಸೀತಮ್ಮ, ಪಿ.ಕೆ.ಮಂಜುನಾಥ್, ಶಾಂತಕುಮಾರ್, ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಸೋಮಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net