ಹಸಿರು ಟವಲ್ ಘನತೆ ಗೌರವ ಉಳಿಸುವಂತಾಗಬೇಕು / ಬಡಗಲಾಪುರ ನಾಗೇಂದ್ರ,

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಲ್ಲಿ ಹಸಿರು ಟವಲ್ ಹಾಕಿಕೊಂಡು ಮರಳು ದಂಧೆ, ಅಧಿಕಾರಿಗಳನ್ನು ಎದುರಿಸಿ ಬೆದರಿಸಿ ಕಮಿಷನ್ ವಸೂಲಿ, ಸೇರಿದಂತೆ ಸ್ವಾರ್ಥಕ್ಕೆ ಬಳಕೆಯಾಗಿದ್ದೇ ಸಂಘಟನೆಗಳ ಕೆಲಸ ಇಂತಹ ಸಂದರ್ಭಗಳಲ್ಲಿ ಸ್ವಾಭಿಮಾನ ಸಂಕೇತವಾಗಿ ರೈತರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೈತ ಸಂಘ ಕೆಲಸ ಮಾಡುವಂತಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ರಾಜ್ಯ ರೈತ ಸಂಘದ ಕಾರ್ಯಕರ್ತರ ಸಭೆ, ಕಾರ್ಯಾಗಾರ ಹಾಗೂ ನೂತನ ಸಮಿತಿ ಆಯ್ಕೆ ಕಾರ್ಯಕ್ರಮದಲ್ಲಿ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಹಿಂದಿನಿAದಲೂ ಹಸಿರು ಟವಲ್ ಹಾಕಿಕೊಂಡವರು ದಾರಿ ತಪ್ಪಿದ್ದೇ ಹೆಚ್ಚು ಕಾಟಾಚರಕ್ಕೆ ಹೋರಾಟ ಮಾಡುತ್ತಾರೆ. ಅದರಿಂದ ಏನು ಪ್ರಯೋಜನವಾಗಲಿಲ್ಲ. ಆ ರೀತಿಯ ದಿಕ್ಕು ತಪ್ಪುವ ಚಳವಳಿಗಾರರು ನೀವುಗಳು ಆಗಬಾರದು, ರೈತ ಚಳುವಳಿಯ ವಿಚಾರಗಳು ನೈಜ ಸಮಸ್ಯೆಗಳಿಗೆ ಪರಿಹಾರವಾಗಿ ಹಳ್ಳಿಯ ಕಟ್ಟಕಡೆಯ ವ್ಯಕ್ತಿಗೆ ಮುಟ್ಟುವಂತೆ ರೈತ ಸಂಘದ ಘನತೆ ಗೌರವಗಳನ್ನು ಉಳಿಸುವ ಕಾರ್ಯಕರ್ತರಾಗಬೇಕು ಎಂದರು.

ರೈತ ಸಂಘವು ಅನೇಕ ತ್ಯಾಗ ಬಲಿದಾನಗಳ ಮೂಲಕ ತಮ್ಮ ವೈಯುಕ್ತಿಕ ಬದುಕುಗಳನ್ನು ಲೆಕ್ಕಿಸದೆ ಚಳುವಳಿಯನ್ನು ಕಟ್ಟಿದ್ದಾರೆ. ರೈತ ಸಂಘದ ಕಾರ್ಯಕರ್ತರು ರಾಜಕೀಯ ಹಾಗೂ ಹಣ ಆಸೆಗೆ ಚಳುವಳಿಗೆ ಬಂದವರಲ್ಲ. ಸಂಘದ ಸಂವಿಧಾನ ಆಲೋಚನೆಗಳೊಂದಿಗೆ ಪಾರದರ್ಶಕವಾಗಿ ಜಾತಿ ಧರ್ಮಗಳನ್ನು ಒಳಗೊಂಡAತೆ ಕೋಮುವಾದಿಗಳನ್ನು ಜಾತಿವಾದಿಗಳ ವಿರುದ್ದವಾಗಿ ಚಳುವಳಿಯ ಪರಂಪರೆಗೆ ಹೆಸರಾಗಿದ್ದಾರೆ. ಅದೇ ನಿಟ್ಟಿನಲ್ಲಿ ನೀವುಗಳು ಜಿಲ್ಲೆಯಲ್ಲಿ ಉಳಿಸಿಕೊಂಡು ಸಂಘಟನೆಯನ್ನು ಕಟ್ಟಬೇಕು ಎಂದರು.

ಸAಘಟನೆಯ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರವು ಕಾರ್ಪೊರೇಟ್ ಕೃಷಿಯನ್ನು ಪರಿಚಯಿಸುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೊಂದರೆಯಾಗಲಿದೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ನೀತಿ, ನಿಯಮಾವಳಿಗಳ ಕುರಿತು ಚರ್ಚೆ ನಡೆಯಬೇಕಾಗಿದೆ ರೈತರ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರನ್ನು ರಕ್ಷಣೆಗೆ ಸರ್ಕಾರಗಳು ಮುಂದಾಗಬೇಕು ಎಂದರು.

ಸAಘಟನೆಯ ರಾಜ್ಯ ಉಪಾಧ್ಯಕ್ಷ ಕೆ.ಮಲ್ಲಯ್ಯ ಅಧ್ಯಕ್ಷೆ ವಹಿಸಿದ್ದರು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೊಣ್ಣಚ್ಚ, ಸಂಘಟನಾ ಕಾರ್ಯದರ್ಶಿ, ಕೆ.ಎಲ್ ಚಂದ್ರಶೇಖರ್, ರಾಜ್ಯ ಮಹಿಳಾ ಸಂಚಾಲಕಿ ರಮ್ಯ ರಾಮಣ್ಣ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಮದ್ದೇರಿ ಮುನಿರೆಡ್ಡಿ ಮುಂತಾದವರು,

ನೂತನ ಜಿಲ್ಲಾ ಅಧ್ಯಕ್ಷರಾಗಿ ಕರಗ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೂಟೇರಿ ನಾಗರಾಜ್, ಗೌರವ ಅಧ್ಯಕ್ಷ ಸೊಣ್ಣೇಗೌಡ, ಸಂಘಟನಾ ಕಾರ್ಯದರ್ಶಿ ಬೈತಿರೆಡ್ಡಿ, ಮಹಿಳಾ ಘಟಕಕ್ಕೆ ರತ್ನಮ್ಮ, ಸುಜಾತಮ್ಮ, ರೇಣುಕಾ, ಯುವ ಘಟಕಕ್ಕೆ ಮಂಜುನಾಥ್, ಜಗದೀಶ್ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ಚಿತ್ರ ೧೦ ಕೆ.ಎಲ್.ಆರ್. ೦೩ : ಪತ್ರಕರ್ತರ ಭವನದಲ್ಲಿ ರೈತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟನೆ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ, ರಾಜ್ಯ ಉಪಧ್ಯಾಕ್ಷ ಕೆ.ಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೊಣ್ಣಚ್ಚ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net