ಹಳೆಯ ಪಿಂಚಣಿ ಮರುಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ

9
Published on

ಮೈಸೂರು: ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ಹಳೇ ಪಿಂಚಣಿ ಯೋಜನೆ ಮರುಸ್ಥಾಪನೆಗಾಗಿ ಜಂಟಿ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಿಂದ ಬೈಕ್‌ನಲ್ಲಿ ಹಳೆಯ ಹಾಲಿನ ಡೇರಿ ಬಳಿಗೆ ತೆರಳಿದ ಪ್ರತಿಭಟನಾಕಾರರು, ಅಲ್ಲಿಂದ ನೂತನ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ನಿರಂತರ ಹೋರಾಟದಿಂದ ಜಾರ್ಖಂಡ್, ರಾಜಸ್ಥಾನ, ಛತ್ತೀಸ್‌ಗಡ, ಪಂಜಾಬ್ ಮತ್ತು ಹಿಮಾಚಲಪ್ರದೇಶದಲ್ಲಿ ಎನ್‌ಪಿಎಸ್ ಅನ್ನು ತೆಗೆದು, ಹಳೆಯ ಪಿಂಚಣಿ ಯೋಜನೆ ಮರು ಸ್ಥಾಪಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಎನ್‌ಪಿಎಸ್ ಸಕ್ಯೆಾಪ್ ಮಾಡಲು ಸಿದ್ಧವಾಗಿಲ್ಲ. ಇದರಿಂದಾಗಿ ಕಾರ್ಮಿಕರ ತಲೆ ಮೇಲೆ ಕತ್ತಿ ನೇತಾಡುವಂತಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ರೈಲ್ವೆ, ರಕ್ಷಣಾ, ಅಂಚೆ ಮತ್ತು ರಾಜ್ಯ ಸರ್ಕಾರದ ನೌಕರರು, ಶಿಕ್ಷಕರು ಸೇರಿದ ಒಕ್ಕೂಟವನ್ನು ಒಳಗೊಂಡ ರಾಷ್ಟ್ರೀಯ ಜಂಟಿ ಕೌನ್ಸಿಲ್ ಆಫ್ ಆಕ್ಷನ್ ಅಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರೈಲ್ವೆ ಇಲಾಖೆಯ ವಿಜಯ್‌ಕುಮಾರ್, ಶಿವಪ್ರಕಾಶ್, ಮಹೇಶ್ ಇತರರು ಇದ್ದರು.:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net