ಹಲ್ಲೆಗೆ ಯತ್ನಿಸಿದವರ ಬಂಧನ

prajavani_2024-09-18_1pz8prml_deccanherald_import_sites_dh_files_article_images_2019_10_12_Arrest-1570847915.jpeg
Published on

ಕೋಲಾರ: ತಾಲೂಕಿನ ಹೊನ್ನೇನಹಳ್ಳಿಯ ಸುನಿಲ್​ ಎಂಬಾತ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿದ್ದು, ಇದಕ್ಕೆ ನಿರಾಕರಿಸಿದಳೆಂದು ಬೆದರಿಕೆ ಹಾಕಿದ್ದ ಆರೋಪದಲ್ಲಿ ಮೂವರನ್ನು ಕೋಲಾರ ಗ್ರಾಮಾಂತರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹೊನ್ನೇನಹಳ್ಳಿ ನಿವಾಸಿ ಸುನೀಲ್​ ಕುಮಾರ್​ (27), ಕೋಲಾರದ ವಿನೋಬ ನಗರ ನಿವಾಸಿ ಯಶ್ವಂತ್​ ಯಾದವ್​ (26) ಹಾಗೂ ತಾಲೂಕಿನ ಉರುಗಿಲಿ ಮನೋಜ್​ ಕುಮಾರ್​ (26) ಬಂಧಿತರು.

ಸುನೀಲ್​ ಮತ್ತು ಇತರರು ಕಾರಿನಲ್ಲಿ, ಕಬ್ಬಿಣದ ಲಾಂಗ್​, ಮಚ್ಚುಗಳನ್ನು ಇಟ್ಟುಕೊಂಡು ಮಾ.8ರಂದು ರಾತ್ರಿ 9 ಗಂಟೆ ಸಮಯದಲ್ಲಿ ಯುವತಿ ತಂದೆ ರಾಮಸ್ವಾಮಯ್ಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಸಂಬಂಧ ರಾಮಸ್ವಾಮಯ್ಯ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಕೈಗೊಂಡಿದ್ದ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುನೀಲ್​ ವಿರುದ್ಧ ಈಗಾಗಲೇ ಎಚ್​ಎಎಲ್​ ಪೊಲೀಸ್​ ಠಾಣೆಯಲ್ಲಿ ಹಾಗೂ ಯಶ್ವಂತ್​ ಯಾದವ್​ ವಿರುದ್ಧ ಚಲನಚಿತ್ರ ನಟ ದಿ.ವಜ್ರಮುನಿ ಅಳಿಯನನ್ನು ಕಿಡ್ನಾಪ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಡಿಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲಿಸರು ತಿಳಿಸಿದರು. ತನಿಖಾ ತಂಡದ ಕಾರ್ಯವನ್ನು ಎಸ್ಪಿ ಬಿ.ನಿಖಿಲ್​ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net