ಹಲಾಲ್‌ ಮುಕ್ತ ದೀಪಾವಳಿ ಅಭಿಯಾನ ಶುರು; ಮುತಾಲಿಕ್ ಗುಡುಗು

pramod-mutalik-320
Published on

ಹಾವೇರಿ: ಈ ಬಾರಿ ದೀಪಾವಳಿಯನ್ನು ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಶುರು ಮಾಡಿದ್ದೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಎಲ್ಲ ಹಿಂದು ಸಂಘಟನೆಗಳ ಒಕ್ಕೂಟದಿಂದ ಅಭಿಯಾನ ಶುರು ಮಾಡಲಾಗಿದೆ.

ಹಲಾಲ್ ಅನ್ನೋದು ಖುರಾನ್ ನಲ್ಲಿ ಮಾಂಸದ ಆಹಾರದಲ್ಲಿ ಮಾತ್ರವಿತ್ತು.

ಇವತ್ತು ಹಲಾಲ್ ಅನ್ನೋದು ಮಾಂಸದಲ್ಲಿ ಮಾತ್ರವಲ್ಲ ಎಲ್ಲ ಪದಾರ್ಥಗಳಲ್ಲೂ ಹಲಾಲ್ ಸರ್ಟಿಫಿಕೇಟ್ ಇದೆ.

ಇದ್ರಿಂದ ಲಕ್ಷಾಂತರ ಕೋಟಿ ಹಣ ಅಲ್ ಜಮಾಯತ್ ಅಲ್ ಉಲೇಮಾ ಟ್ರಸ್ಟ್ ಅನ್ನೋದಕ್ಕೆ ಜಮಾ ಆಗಿದೆ.

ಈ ಹಣ ದುಷ್ಟರಿಗೆ, ಭಯೋತ್ಪಾದಕರಿಗೆ, ಮುಸ್ಲಿಂ ಗೂಂಡಾಗಳಿಗೆ ಈ ಹಣ ಹೋಗ್ತಿದೆ.
ಇದನ್ನು ತಡೆಯಲು ಹಲಾಲ್ ಮುಕ್ತ ದೀಪಾವಳಿ ಆಚರಣೆ ಮಾಡಬೇಕು.

ಮುಸ್ಲಿಂರ ಜೊತೆ ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಮಾಡಬಾರದು.

ಹಿಂದೂಗಳ ಹಬ್ಬ ಹಿಂದೂಗಳ ಕಡೆಯಿಂದ ಖರೀದಿ ಮಾಡಿದರೆ ಮಾತ್ರ ಶಾಸ್ತ್ರಬದ್ಧ ಆಗುತ್ತೆ.

ಮುಸ್ಲಿಂರ ಕಡೆಯಿಂದ ಖರೀದಿಯಾದ್ರೆ ಅಶಾಸ್ತ್ರ ಆಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net