

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವೀಣಾ ಹಾಗೂ ಉಪಾಧ್ಯಕ್ಷರಾಗಿ ಮೀನಾಕ್ಷಿ ಆಯ್ಕೆಯಾದರು.
ಗುರುವಾರ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವೀಣಾ ಹಾಗೂ ಆರ್.ಎಸ್.ಸಂತೋಷ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
18 ಸದಸ್ಯರ ಪೈಕಿ ವೀಣಾ ಅವರು ಹತ್ತು ಮತ ಪಡೆದು ಜಯಶೀಲರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮೀನಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹಾರಂಗಿ ಇಲಾಖೆಯ ಅಧಿಕಾರಿ ಲೋಹಿತ್ ಘೋಷಣೆ ಮಾಡಿದರು.
ಹಲಗನಹಳ್ಳಿ ಗ್ರಾಮದ ಚುನಾವಣೆ ಅತಿ ಸೂಕ್ಷ್ಮವಾಗಿದ್ದ ಹಿನ್ನೆಲೆ ಹುಣಸೂರು ಡಿವೈಎಸ್ಪಿ ಮಹೇಶ್, ಬೆಟ್ಟದಪುರ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಎತ್ತಿನಮನಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿ ಸದಸ್ಯರಾದ ಸೋಯಲ್ ಪಾಷಾ, ರಫೀಕ್ ಅಹಮದ್, ನಜೀಬ್ ಖಾನ್, ವಸಂತಾ, ಪದ್ಮಾ, ನೂರ್ ಅಸ್ಮಾ, ಸನೂಬಿಯ, ವೆಂಕಟೇಶ್, ಶಫೀರ್ ಅಹ್ಮದ್, ಸುರೇಶ್, ನಾಗಮ್ಮ, ಕುಮಾರ, ಗೀತಾ, ಪುಟ್ಟಸ್ವಾಮಿಗೌಡ, ಮುಖಂಡರಾದ ಚಂದ್ರಶೇಖರ್, ನಂಜುಂಡೇಗೌಡ, ರವೀಂದ್ರ, ಮಣಿಕುಮಾರ್, ನಜೀರ್, ಶಫಿ ಅಹಮದ್, ವೆಂಕಟೇಶ್, ಪಿಡಿಒ ರವಿಕುಮಾರ್ ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.