ಹಬ್ಬಗಳಿಂದ ಪರಸ್ಪರ ಬಾಂಧವ್ಯ ವೃದ್ಧಿ

2MDG1 ganapa
ಜಾವಳಿ ಗ್ರಾಮದ ಶ್ರೀ ವಿದ್ಯಾ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪಿಎಸ್‌ಐ ದಿಲೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಪತ್, ಪರೀಕ್ಷಿತ್ ಜಾವಳಿ, ಎಂ.ವಿ.ಜಗದೀಶ್, ಶಶಿಕಿರಣ್, ಎಂ.ವಿ.ಜಯರಾಜ್, ಕೃಷ್ಣಟೈಲರ್, ಚೆನ್ನಕೇಶವ ಗೌಡ, ರಂಜಿತ್ ಇತರರಿದ್ದರು.
Published on

ಮೂಡಿಗೆರೆ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಪ್ರತಿವರ್ಷ ಗಣೇಶೋತ್ಸವ ಕಾರ್ಯಕ್ರಮಗಳನ್ನು ಧರ್ಮಬೇಧವಿಲ್ಲದೆ ಆಚರಿಸಿಕೊಂಡು ಬರುತ್ತಿರುವುದರಿಂದ ನಾಡಿನಲ್ಲಿ ಮಳೆ, ಬೆಳೆ ಹೆಚ್ಚಾಗಿ ಸಂಪತ್ತು ಕ್ರೂಢೀಕರಣಗೊಂಡಿದೆ ಎಂದು ವಕೀಲ ಪರೀಕ್ಷಿತ್ ಜಾವಳಿ ತಿಳಿಸಿದರು.

ಜಾವಳಿ ಗ್ರಾಮದಲ್ಲಿ ಶ್ರೀ ವಿದ್ಯಾಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಬ್ಬದಲ್ಲಿ ಸಹೋದರಿಯರಿಗೆ ಅರಿಶಿಣ ಕುಂಕುಮ, ಹಣ್ಣು, ಕಾಯಿ, ಬಳೆ, ವೀಳ್ಯದೆಲೆ ಮತ್ತು

ಪೂಜೆ ಸಾಮಗ್ರಿಗಳ ಬಾಗಿನವನ್ನು ನೀಡುವ ಸಂಪ್ರದಾಯವನ್ನು ಹಿಂದಿನಿಂದಲೂ ಹಿರಿಯರು ಬೆಳೆಸಿಕೊಂಡು ಬಂದಿದ್ದಾರೆ. ಇದರಿಂದ ಕುಟುಂಬಗಳ ಸಂಬಂಧ ಗಟ್ಟಿಯಾಗುತ್ತಿದೆ. ಆಧುನಿಕ

ಕಾಲದಲ್ಲಿ ಕುಟುಂಬ, ಬಂಧುತ್ವ ಎಲ್ಲವೂ ಕಣ್ಮರೆಯಾಗುತ್ತಿದೆ. ಹಬ್ಬಗಳಿಂದಾಗಿ ನೆಂಟರ ಮನೆಗೆ ತೆರಳಿ ಬಾಗಿನ ಸಮರ್ಪಿಸುವ ಕಾರಣ ಕುಟುಂಬ ಸಂಬಂಧಗಳು ಗಟ್ಟಿಗೊಳ್ಳುತ್ತಿದೆ ಎಂದು

ತಿಳಿಸಿದರು. ಬಾಳೂರು ಪಿಎಸ್‌ಐ ದೀಲಿಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜಾವಳಿ ಗ್ರಾಮದ ಹಳ್ಳದಲ್ಲಿ ಗಣಪತಿ ಮೂರ್ತಿ ವಿಸರ್ಜಿಸಲಾಯಿತು. ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ

ಗೌರವಾಧ್ಯಕ್ಷ ಎಂ.ವಿ.ಜಗದೀಶ್, ಶಶಿ ಕಿರಣ್, ಎಂ.ವಿ.ಜಯರಾಜ್, ಕೃಷ್ಣ ಟೈಲರ್, ಚನ್ನಕೇಶವಗೌಡ, ರಂಜಿತ್, ಸತೀಶ್, ರಾಜೇಶ್, ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ

ಚಂದ್ರಶೇಖರ್, ಶಶಿಧರ್, ಜಯಂತ್, ಕೃಷ್ಣಪ್ಪ, ಸುಂದರೇಶ್, ಅಮ್ಮು, ಯಮುನಮ್ಮ, ಅರ್ಚಕ ಅವಿನಾಶ್ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net