ಹನುಮದ್ ವ್ರತ ಧಾರ್ಮಿಕ ಕಾರ್ಯಕ್ರಮ

Talikote, Rathotsav, Hanuman,
Published on

ಕೆಆರ್‌ಎಸ್ ರಸ್ತೆ ಸಿಎಫ್‌ಟಿಆರ್‌ಐ ರೈಲ್ವೆ ಆಟದ ಮೈದಾನದ ಎದುರಿನ ಉತ್ತರಾದಿ ಮಠದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿ.13ರ.ದು ಬೆಳಗ್ಗೆ 10ಕ್ಕೆ ಶ್ರೀ ಹನುಮದ್ ವ್ರತ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಅನಿರುದ್ಧಾಚಾರ್ಯ ಪಾಂಡುರಂಗಿ ತಿಳಿಸಿದರು.

ಉತ್ತರಾದಿ ಮಠ ಮಾಧ್ವ ಸಮಾಜದ ಮೂಲ ಗುರು ಮಧ್ವಾಚಾರ್ಯರಿಂದ ಸ್ಥಾಪಿತವಾಗಿ ದೇಶದಾದ್ಯಂತ ಹಲವಾರು ಶಾಖೆ ಹೊಂದಿದೆ. ಈಗ ರೈಲ್ವೆ ಆಟದ ಮೈದಾನದ ಎದುರಿನ ಮಠದಲ್ಲಿ ಅದ್ದೂರಿಯಾಗಿ ಹನುಮದ್ ವ್ರತ ಆಚರಿಸಲಾಗುತ್ತಿದೆ. ಮಧ್ಯಾಹ್ನ 12.30ಕ್ಕೆ ಸಹಸ್ರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಪ್ರಮುಖರಾ ಡಿ.ಟಿ.ಪ್ರಕಾಶ್, ಪ್ರಮೀಳಾ ಭರತ್, ಎನ್.ಎಂ.ನವೀನ್‌ಕುಮಾರ್ ಭಾಗವಹಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net