ಮೈಸೂರು: ಬನ್ನಿಮಂಟಪದ ಹನುಮಂತನಗರದ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿ.12ರಿಂದ 15ರವರೆಗೆ ಹನುಮ ಜಯಂತಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿ.12ರಂದು ಸಂಜೆ 6.30ರಿಂದ ಜಯಂತಿ ಅಂಗವಾಗಿ ರಕ್ಷಾ ಬಂಧನ, ಗಣಪತಿ ಹೋಮ, ನವಗ್ರಹ ಹೋಮ, ಸುದರ್ಶನ ಹೋಮ, ಮಹಾಮಂಗಳಾರತಿ ನಡೆಯಲಿದೆ. ಡಿ.13ರಂದು ಬೆಳಗ್ಗೆ 9ರಿಂದ 11ರವರೆಗೆ ದೇವರಿಗೆ ಚತುಷ್ಟಾರ್ಚನೆ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರಲಿದೆ. ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಡಿ.14ರಂದು ವಿಶೇಷ ಪೂಜೆ, ಅಲಂಕಾರ, ಭಜನಾ ಕಾರ್ಯಕ್ರಮ, ಡಿ.15ರಂದು ಸತ್ಯನಾರಾಯಣ ಸ್ವಾಮಿಪೂಜೆ, ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.