ಹನಗೋಡು ಸುತ್ತಮುತ್ತ ಕಾಡಾನೆ ದಾಳಿ

IMG-20220927-WA0066
ಹನಗೋಡು ಹೋಬಳಿಯ ಉಡುವೇಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಡಾನೆಗಳಿಂದ ನಾಶವಾಗಿರುವ ಭತ್ತದ ಬೆಳೆ.
Published on

ಹನಗೋಡು: ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ಮತ್ತೆ ಕಾಡಾನೆಗಳ ಹಾವಳಿ ಮುಂದುವರಿದಿದ್ದು ರೈತರು ಬೆಳೆದ ಬೆಳೆಗಳನ್ನೆಲ್ಲಾ ತಿಂದು ತುಳಿದು ನಾಶಪಡಿಸಿವೆ.

ಹನಗೋಡು ಹೋಬಳಿಯ ಉಡುವೇಪುರ ಗ್ರಾಮದ ಅಮರ್, ಜಯಣ್ಣ, ಹರೀಶ್, ಮಾಕೇಗೌಡ, ಸುಬ್ರಮಣಿ, ಮಾದೇಗೌಡರಿಗೆ ಸೇರಿದ ಭತ್ತದ ಗದ್ದೆ ಹಾಗೂ ಮಲ್ಲೇಶ ಅವರಿಗೆ ಸೇರಿದ ಗೆಣಸು ಬೆಳೆಯನ್ನು ಸೋಮವಾರ ರಾತ್ರಿ ಗ್ರಾಮದ ಕಾಡಾನೆಗಳ ಹಿಂಡು ನಾಶಪಡಿಸಿವೆ. ಸ್ಥಳಕ್ಕೆ ಹುಣಸೂರು ವನ್ಯಜೀವಿ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಮಹಜರ್ ನಡೆಸಿದರು.ಚಿತ್ರ.1, 2, 3.-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net