

ಹನಗೋಡು(ಹುಣಸೂರು ತಾಲೂಕು): ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಿದರು.
ಹನಗೋಡು ಹೋಬಳಿ ಚಿಲ್ಕುಂದ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡುವುದು, ಅಪಘಾತ ತಡೆಗೆ ಸರಕ್ಷಿತಾ ಕ್ರಮಗಳ ಕುರಿತು ಗ್ರಾಮಸ್ಥರ ಮನವಿಯನ್ನು ಆಲಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಡೀಕರಣ ಮಾಡುವುದರ ಮೂಲಕ ಪಂಚಾಯಿತಿಯಿಂದ ಕ್ರಮ ವಹಿಸುವಂತೆ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜಂಟಿ ಸಭೆ ನೆಡೆಸಿ ವೈಜ್ಞಾನಿಕವಾಗಿ ಡಿವೈಡರ್ ಕಾಣುವಂತೆ ಸಿಂಬಲ್‌ಗಳ ಅಳವಡಿಕೆ ಹಾಗೂ ಫುಟ್‌ಪಾತ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಭರವಸೆ ನೀಡಿದರು. ತುರ್ತು ಸಮಸ್ಯೆಗೆ 112ಕ್ಕೆ ಕರೆ ಮಾಡಬೇಕೆಂದು ತಿಳಿಸಿದರು.
ಡಿವೈಎಸ್‌ಪಿ ರವಿಪ್ರಸಾದ್, ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ರವಿ, ಎಸ್‌ಐ ರಾಧಾ, ಮುಖಂಡರಾದ ಶಿವಕುಮಾರ್, ರೆಹಮತ್, ಸಣ್ಣತಮ್ಮೇಗೌಡ, ದೇವೇಂದ್ರ ಇತರರು ಇದ್ದರು.