ಹಣಕಾಸು ವಿಚಾರವಾಗಿ ಆರಂಭಗೊಂಡ ಗಲಾಟೆ ಕೊಲೆಯಲ್ಲಿ ಅಂತ್ಯ

Crime Logo
Published on

ನಗರದ ಸಾತಗಳ್ಳಿ ಬಡಾವಣೆಯಲ್ಲಿ ಹಣಕಾಸು ವಿಚಾರವಾಗಿ ಆರಂಭಗೊಂಡ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಬಗ್ಗೆ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ರಿಕ್ಷಾ ಚಾಲಕ ಮಹಮದ್ ಖಲೀಂ ವುಲ್ಲಾ(53)ಮೃತರು. ಗಲಾಟೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀನಗರದ ಅಬುಜರ್, ರೆಹಮತ್, ಮುಸ್ಕಾನ್, ತಾಸೀನ್ ಹಾಗೂ ಉಸ್ನಾ ವಿರುದ್ಧ ಮೃತರ ಪತ್ನಿ ರೇಷ್ಮಾ ಬಾನು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ:

ಮೃತ ಖಲೀಂ ವುಲ್ಲಾ ಪತ್ನಿ ಸಂಬಂಧಿ ಶ್ರೀನಗರ ನಿವಾಸಿ ಅಬುಜರ್ ಅವರ ಆಟೋವನ್ನು 80 ಸಾವಿರ ರೂ.ಗೆ ಖರೀದಿಸಿದ್ದಾರೆ. ಬಳಿಕ ಆಟೋ ಮೇಲೆ 60 ಸಾವಿರ ರೂ. ಸಾಲವಿದೆ ಎಂಬ ವಿಚಾರ ಗೊತ್ತಾಗಿದೆ. ಈ ವಿಚಾರವಾಗಿ ಏ.21ರ ರಾತ್ರಿ 9 ಗಂಟೆ ಸಮಯದಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ಅಬುಜರ್ ಮತ್ತು ಆತನ ಕುಟುಂದವರು ತಮ್ಮ ಪತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net