

ಆಲೂರು : ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹಂಜಳಿಗೆ ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರು ಬೆಳೆದ್ದಿದ್ದ ಭತ್ತದಗಳನ್ನ ಸಂಪೂರ್ಣವಾಗಿ ನಾಶಪಡಿಸಿವೆ.ಕರೊನಾ ಮಹಾಮಾರಿಯ ನಡುವೆಯೂ ಎದೆಗುಂದದೆ ಬೆಳೆದ ಬೆಳೆ ಇಂದು ಕಾಡಾನೆಗಳ ಹಾವಳಿಯಿಂದ ರೈತನ ಕೈಸೇರದಂತಾಗಿದೆ. ಇಷ್ಟಾದರೂ ಅರಣ್ಯಾಧಿಕಾರಿಗಳಾಗಲಿ ತಾಲೂಕು ಆಡಳಿತವಾಗಲಿ ತಲೆಕೆಡಸಿಕೊಂಡಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.ಕಳೆದ ಹಲವು ದಿನಗಳಿಂದ ಕೆ. ಹೊಸಕೋಟೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.ಗುರುವಾರ ರಾತ್ರಿ ಹಂಜಳಿಗೆ ಗ್ರಾಮದ ಮಹೇಶ್, ಧರಣೇಶ್, ರಘು, ಸೋಮಣ್ಣ, ರಕ್ಷಿತ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ರೈತರ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಭತ್ತದ ಬೆಳೆಯನ್ನು ನಾಶ ಪಡಿಸುತ್ತಿವೆ.ಕೂಡಲೇ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪಟಾಕಿ, ಸಿಡಿಸುವ ಮೂಲಕ ಅವುಗಳನ್ನು ಕಾಡಿಗಟ್ಟಬೇಕು ಮತ್ತು ಸೂಕ್ತ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ