

ಆಲೂರು : ದೇಶ ಮತ್ತು ದೇಶಾಭಿಮಾನ ಎದೆಯೊಳಗೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಅರ್ಥ ಪಡೆಯುತ್ತದೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುಗಾರಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ನಿವೃತ್ತ ಶಿಕ್ಷಕ ಎ.ಟಿ.ಮಲ್ಲೇಶ್ ತಿಳಿಸಿದರು.
ಆಲೂರು ಪಟ್ಟಣದ ಯಡೂರು ಕೊಡಿಗೆಯಲ್ಲಿರುವ ಸ್ನೇಹಜೀವಿ ಚೇತನ್ ಹಾಗೂ ನವಾಜ್ ಯುವಕ ಬಳಗದವರಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ಒಂದು ದಿನದ ತೋರ್ಪಡಿಕೆ ಕಾರ್ಯಕ್ರಮವಾಗಬಾರದು. ದೇಶ ಮತ್ತು ದೇಶಾಭಿಮಾನ ಎದೆಯೊಳಗೆ ಇದ್ದಾಗ ಮಾತ್ರ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಅರ್ಥ ಪಡೆಯುತ್ತದೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುಗಾರಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಸೈನಿಕ ವೆಂಕಟೇಶ್ ಕದಾಳು ಮಾತನಾಡಿ, ದೇಶದ ಬಗ್ಗೆ ಎಲ್ಲ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಸ್ವಾತಂತ್ರ್ಯ ಹೋರಾಟದ ಜತೆಗೆ ದೇಶದ ಎಲ್ಲ ವಿಚಾರಗಳು ತಿಳಿದಿರಬೇಕು, ಅದರ ಜತೆಗೆ ದೇಶ ಪ್ರೇಮವನ್ನು ಬೆಳೆಸುವಂತಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಲವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಸದಸ್ಯ ಕಬಿರ್ ಅಹಮದ್, ಎಫ್.ಎಂ. ಸ್ನೇಹಜೀವಿ ಬಳಗದ ಚೇತನ್, ನವಾಜ್, ಆರೀಫ್, ಮುಬಾರಕ್, ಶಾಹಿದ್ ಸಲಿಂ, ಜಾಮಿಯ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ವಹೀದ್, ಜಂಟಿ ಕಾರ್ಯದರ್ಶಿ ಮೊಹಮ್ಮದ್ ಜಾಫರ್, ಜಿಲ್ಲಾ ವಕ್ಫ್ ಮಾಜಿ ಸದಸ್ಯ ಕಬೀರ್ ಅಹಮದ್ ಸೇರಿದಂತೆ ಮುಂತಾದವರು ಹಾಜರಿದ್ದರು.