ಸ್ವಾತಂತ್ರೃಕ್ಕಾಗಿ ಮಹನೀಯರಿಂದ ಜೀವ ಬಲಿದಾನ

16BANNU1
ಬನ್ನೂರಿನ ಸಮೀಪದ ನವಕೀಸ್ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರೃ ದಿನವನ್ನು ಆಚರಿಸಲಾಯಿತು. ತಾರಕೇಶ್ವರಿ, ಮಹೇಂದ್ರಸಿಂಗ್ ಕಾಳಪ್ಪ, ಮಹೇ, ಅನೂಪ್, ಡಾ.ಜಿ.ಸಿದ್ದೇಶ್, ಕರಣ್, ಜನಕ್‌ಸಿಂಗ್‌ಪಾಟೀಲ್, ವನ್ಯಸಿಂಗ್, ವಿರಾಟ್‌ಸಿಂಗ್ ಇದ್ದರು.
Published on

ಬನ್ನೂರು: ಆರು ಲಕ್ಷಕ್ಕೂ ಹೆಚ್ಚು ಮಹಾಮಹಿಮರು ತಮ್ಮ ಜೀವವನ್ನು ಬಲಿದಾನ ಮಾಡುವ ಮೂಲಕ ಸ್ವಾತಂತ್ರೃ ತಂದು ಕೊಟ್ಟಿದ್ದಾರೆ ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರ ಸಿಂಗ್‌ಕಾಳಪ್ಪ ತಿಳಿಸಿದರು.

ಸಮೀಪದ ನವಕೀಸ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರೃದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹನೀಯರ ಬಲಿದಾನದ ನೆರಳಿನಲ್ಲಿ ನಾವು ಸ್ವತಂತ್ರ ಅನುಭವಿಸುತ್ತಿದ್ದೇವೆ. ಸುಭಾಷ್‌ಚಂದ್ರಬೋಸ್, ಮಹಾತ್ಮಗಾಂಧಿ, ಕಿತ್ತೂರು ರಾಣಿ ಚನ್ಮಮ್ಮ, ನೆಹರು, ಸೇರಿದಂತೆ ಹಲವರ ಸಾಧನೆಯ ಪ್ರತೀಕವೇ ಇಂದಿನ ಸ್ವತಂತ್ರ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ತಾರಕೇಶ್ವರಿ, ಆಡಳಿತಾಧಿಕಾರಿ ಮಹೇಶ್, ಅನೂಪ್, ಡಾ.ಜಿ.ಸಿದ್ದೇಶ್, ಕರಣ್, ಜನಕ್‌ಸಿಂಗ್‌ಪಾಟೀಲ್, ವನ್ಯಸಿಂಗ್, ವಿರಾಟ್‌ಸಿಂಗ್, ಸಂತೋಷ್‌ಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net