ಸ್ವಚ್ಛತೆಯ ನಿರ್ವಹಣೆ ಸವಾಲಿನ ಕೆಲಸ

11 TKE 4 (KUVEMPU)
ತರೀಕೆರೆ ತಾಲೂಕಿನ ನಂದಿ ಹೊಸಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಶಿಬಿರವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಪಿ.ವಿ.ಓಂಕಾರಮೂರ್ತಿ, ಧನುಷ್ ಗಾರ್ಗಿ, ಚಂದ್ರಪ್ಪ, ದೇವೇಂದ್ರ ಮೂರ್ತಿ, ಡಾ.ದಿಲೀಪ್ ಕುಮಾರ್ ಇತರರಿದ್ದರು.
Published on

ತರೀಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಜನತೆ ಗ್ರಾಮ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು

ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ತಾಲೂಕಿನ ನಂದಿ ಹೊಸಳ್ಳಿ ಗ್ರಾಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಏರ್ಪಡಿಸಿದ್ದ ಗ್ರಾಮೀಣ ಶಿಬಿರ ಉದ್ಘಾಟಿಸಿ

ಮಾತನಾಡಿದರು.

ಇಂದು ಬಹುತೇಕ ಗ್ರಾಮಗಳು ಸರ್ವಾಂಗೀಣ ಬೆಳವಣಿಗೆ ಕಾಣುತ್ತಿದ್ದರೂ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿವೆ. ಎಲ್ಲೆಂದರಲ್ಲಿ ಕಸ ಎಸೆಯುವ ಮನೋಭಾವ ಜನರಲ್ಲಿ ಹೆಚ್ಚಾಗುತ್ತಿದ್ದು ಕಸ ನಿರ್ವಹಣೆಗೆ

ಗ್ರಾಪಂಗಳನ್ನೇ ಅವಲಂಬಿಸುವುದು ಸರಿಯಲ್ಲ. ಉತ್ತಮ ಪರಿಸರ ನಿಮಾರ್ಣಕ್ಕೆ ಸ್ವಚ್ಛತೆ ಸಹಕಾರಿಯಾಗಿದ್ದು ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದರು.

ಸರ್ಕಾರಿ ಆಸ್ಪತ್ರೆ ಐಸಿಟಿಸಿ ಸಂಚಾಲಕ ಪಿ.ವಿ.ಓಂಕಾರಮೂರ್ತಿ ಮಾತನಾಡಿ, ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಕುರಿತು ಜಾಗೃತಿ

ಮೂಡಿಸಬೇಕಿದೆ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಧನುಷ್ ಗಾರ್ಗಿ ಮಾತನಾಡಿ, ಉತ್ತಮ ಆರೋಗ್ಯ ಮತ್ತು ಒಳ್ಳೆಯ ಆಲೋಚನೆಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಚಂದ್ರಪ್ಪ, ಮಾಜಿ ಅಧ್ಯಕ್ಷ ದೇವೇಂದ್ರ ಮೂರ್ತಿ, ಶಿಕ್ಷಕ ಮಲ್ಲೇಶ್, ಗ್ರಾಮಸ್ಥರಾದ ಲೋಕೇಶ್, ಸತೀಶ್, ಶಿಬಿರಾಧಿಕಾರಿ ಡಾ.ದಿಲೀಪ್ ಕುಮಾರ್ ಸೇರಿ

ಶಿಬಿರಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net