ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

4HDK1
Published on


ಮೈಸೂರು : ಎಚ್.ಡಿ.ಕೋಟೆ ಪಟ್ಟಣದ ಪುರಸಭೆ ವತಿಯಿಂದ ಸ್ವಚ್ಛತಾ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಪುರಸಭಾ ಮುಂಭಾಗ ಚಾಲನೆ ನೀಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್ ಮಾತನಾಡಿ, ಪ್ರತಿ ತಿಂಗಳು ಒಂದು ದಿನ ಒಂದೊಂದು ವಾರ್ಡ್‌ಗಳನ್ನು ಸ್ವಚ್ಛ ಮಾಡುತ್ತಾ ಬಂದದ್ದೇ ಆದಲ್ಲಿ ಪಟ್ಟಣವನ್ನು ಸುಂದರವಾಗಿಸಬಹುದು ಎಂದು ಅಭಿಪ್ರಾಯಪಟ್ಟರು.


ಪಟ್ಟಣದ ಮೊದಲನೇ ಮುಖ್ಯ ರಸ್ತೆ, ಎರಡನೇ ಮುಖ್ಯ ರಸ್ತೆ ಹಾಗೂ ಬಸ್ ಸ್ಟ್ಯಾಂಡ್ ಮುಂಭಾಗ ಸ್ವತಃ ಪುರಸಭಾ ಸದಸ್ಯರು, ವರ್ತಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸೇರಿದಂತೆ ಎಲ್ಲರೂ ಒಗ್ಗೂಡಿ ಕಸವನ್ನು ಹಾದು, ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಹಾಕಲಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಂ.ಶಶಿಧರ್ ಮಾತನಾಡಿ, ಪ್ರತಿಯೊಂದು ಪಟ್ಟಣ, ರಸ್ತೆ, ದೇವಸ್ಥಾನ, ಶಾಲೆ ಮತ್ತು ಉದ್ಯಾನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷೆ ಅನಿತಾ ನಿಂಗನಾಯಕ, ಸದಸ್ಯರಾದ ಮಿಲ್ ನಾಗರಾಜು, ನಂಜಪ್ಪ, ಶಾಂತಮ್ಮ, ಸಿದ್ದರಾಜು, ಮುಖ್ಯಾಧಿಕಾರಿ ಸುರೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಶಿಧರ್, ವರ್ತಕರ ಸಂಘದ ಅಧ್ಯಕ್ಷ ವಿನಯ್ ಬಜರಂಗಿ, ಮುಖಂಡರಾದ ಎಚ್.ಕೆ.ಪ್ರಕಾಶ್, ಕೃಷ್ಣಮೂರ್ತಿ, ಪವಿತ್ರಾ, ಅಶ್ವಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net