ಸ್ವಉದ್ಯೋಗ ಆರ್ಥಿಕ ಪ್ರಗತಿಗೆ ಪೂರಕ

24 nrp 4 santhe
ಎನ್.ಆರ್.ಪುರದ ನಾಗಲಾಪುರ ಗ್ರಾಪಂಯಲ್ಲಿ ಸಂಜೀವಿನಿ ಮಾಸಿಕ ಸಂತೆಯನ್ನು ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ ಉದ್ಘಾಟಿಸಿದರು. ಭಾರತಿ, ಶೋಭಾ, ಪ್ರೇಮಕುಮಾರ್, ಸುಬ್ರಹ್ಮಣ್ಯ, ರಾಧಾ, ರುಕ್ಸಾನ, ನಿರ್ಮಲಾ ಇದ್ದರು.
Published on

ಎನ್.ಆರ್.ಪುರ: ಮಹಿಳೆಯರು ಸ್ವ ಉದ್ಯೋಗ ಮಾಡುವುದರಿಂದ ಕುಟುಂಬದ ಆರ್ಥಿಕ ಪ್ರಗತಿಗೆ ಪೂರಕ ಎಂದು ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ ತಿಳಿಸಿದರು.

ನಾಗಲಾಪುರ ಗ್ರಾಪಂಯಲ್ಲಿ ಸಂಜೀವಿನಿ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸ್ವಸಹಾಯ ಸಂಘಗಳಿಗೆ ಸಾಲದ ರೂಪದಲ್ಲಿ ಹಣ ನೀಡುತ್ತದೆ. ಎಲ್ಲ ಮಹಿಳೆಯರು ಒಟ್ಟಾಗಿ ಕರಕುಶಲ ತಯಾರಿಕೆ, ಗುಡಿ ಕೈಗಾರಿಕೆ ಮಾಡಬಹುದು. ಸರ್ಕಾರದ ಕಾರ್ಯಕ್ರಮಗಳನ್ನು ಮಹಿಳೆಯರು ಉಪಯೋಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಮುಂದಿನ ವರ್ಷ ಮಾಸಿಕ ಸಂತೆಯಲ್ಲಿ ಇನ್ನಷ್ಟು ಅಂಗಡಿಗಳನ್ನು ತೆರೆಯಬೇಕು ಎಂದರು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಮಾತನಾಡಿ, ನಾವು ಪ್ರತಿ ವಷರ್ ಮಾಸಿಕ ಸಂತೆ ನಡೆಸುತ್ತಿದ್ದೇವೆ. ಎಲ್ಲ ಸಂಘದ ಸದಸ್ಯರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು. ಗ್ರಾಪಂ ಸದಸ್ಯೆ ಶೋಭಾ, ಪಿಡಿಒ ಪ್ರೇಮಕುಮಾರ್, ತಾಪಂ ಎನ್.ಆರ್.ಎಲ್.ಎಂ.ನ ಸಂಯೋಜಕ ಸುಬ್ರಹ್ಮಣ್ಯ, ಸಂಘದ ಪದಾಧಿಕಾರಿಗಳಾದ ಮೇರಿ, ರಾಧಾ, ರುಕ್ಸಾನ, ನಿರ್ಮಲಾ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net