ಸ್ನಾತಕೋತ್ತರ ಕೇಂದ್ರದಲ್ಲಿ ಯುವ ಸಪ್ತಾಹ, ರಸ್ತೆ ಸುರಕ್ಷತಾ ಜಾಗೃತಿ / ವಿವೇಕಾನಂದರ ಆದರ್ಶ ಪಾಲಿಸಿ ಸಂಸ್ಕಾರ ಬೆಳೆಸಿಕೊಳ್ಳಿ / ಸುನಿಲ ಎಸ್.ಹೊಸಮನಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳು, ಸಂಸ್ಕಾರ ಇಂದಿನ ಯುವಕರಲ್ಲಿ ಬೆಳೆಸುವ ಅಗತ್ಯವಿದೆ. ಅವರ ಜೀವನ ಚರಿತ್ರೆ ತಿಳಿಯುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಹೊಣೆಯೂ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ತಿಳಿಸಿದರು.

ಜಿಲ್ಲಾಡಳಿತ, ಜಿಪಂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಕಲಾಖೆ, ಮೈಭಾರತ್-ನೆಹರು ಯುವಕೇಂದ್ರ ಬೆಂಗಳೂರು ಉತ್ತರ ವಿವಿ, ನಿಮ್ಹಾನ್ಸ್ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರ ಹೊರವಲಯದ ಮಂಗ್ರಸAದ್ರ ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುವ ಸಪ್ತಾಹ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಸ್ವಾವಲಂಬಿ ಬದುಕಿನ ಕುರಿತು ಚಿಂತಸದೇ ತಂದೆ, ತಾಯಿ ಸಂಪಾದಿಸಿದ ಹಣವನ್ನು ಸ್ವೇಚ್ಚಾಚಾರದಿಂದ ಬಳಸುವ ಮೂಲಕ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಇದೇ ಸಂದರ್ಭದಲ್ಲಿ ಸಂಚಾರಿ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಕುರಿತು ಮಾಹಿತಿ ನೀಡಿ, ಅಪಘಾತಗಳಲ್ಲಿ ಸಹಸ್ರಾರು ಜನ ಸಾಯುತ್ತಿದ್ದಾರೆ, ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಂಚಾರಿ ನಿಯಮ ಪಾಲಿಸದಿರುವುದೇ ಮುಖ್ಯ ಕಾರಣವಾಗಿದೆ. ಕುಡಿದು ವಾಹನ ಚಲಾವಣೆಯೂ ಒಂದು ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಮಾತನಾಡಿ, ಯುವ ಶಕ್ತಿ ಉತ್ತಮ ಕೌಶಲ್ಯ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು, ವ್ಯಸನಗಳಿಗೆ ತುತ್ತಾಗಿ ದೇಶಕ್ಕೆ ಮತ್ತು ಸಮಾಜ, ಪೋಷಕರಿಗೆ ಹೊರೆಯಗಬಾರದು ಎಂದು ಕಿವಿಮಾತು ಹೇಳಿದರು.

ಯುವಕರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವುದರಿಂದ ದುಶ್ಚಟಗಳಿಗೆ ಸ್ವಲ್ಪ ಮಟ್ಟಿಗೆ ದೂರವಾಗಬಹುದು. ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದರು.

ಕಾರ್ಯಕ್ರಮದಲ್ಲಿ ವಿಂಗ್ಸ್ ಇಟಿಸಿಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ.ತಾರಾಮುರಳಿ, ಯುವ ಸಬಲೀಕರಣ ಹಾಗೂ ಜಾನಪದ ಕಲಾವಿದ ಬಿ.ವೆಂಕಟಾಚಲಪತಿ, ನಿಮ್ಹಾನ್ಸ್ ರಾಜ್ಯ ಕ್ಷೇತ್ರ ಸಂಯೋಜಕ ಆರ್.ನಾಗರಾಜ, ಮನೋತಜ್ಞ ಡಾ.ತವಿಕುಮರ್ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೧೯ ಕೆ.ಎಲ್.ಆರ್. ೦೪ : ಮಂಗ್ರಸAದ್ರ ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿಹಮ್ಮಿಕೊAಡಿದ್ದ ಯುವ ಸಪ್ತಾಹ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ಉದ್ಘಾಟಿಸಿದರು. ಕ್ರೀಡಾ ಇಲಾಖೆ ಸಹಾಯಕಿ ಆರ್. ಗೀತಾ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net