ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಹೆಗಲಿಗೇರಿಸಿಕೊಂಡ ವಿವಾದಾತ್ಮಕ ಹೇಳಿಕೆ / ಇದನ್ನೇ ಅಸ್ತçವನ್ನಾಗಿ ಉಪಯೋಗಿಸಿಕೊಳ್ಳುತ್ತಿರುವ ಬಿಜೆಪಿ-ಜೆಡಿಎಸ್ / ಶಾಸಕರ ಪರವಾಗಿ ನಿಂತಿರುವ ಅವರ ಅಭಿಮಾನಿಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಆಪರೇಷನ್ ಸಿಂಧೂರ ಬಗ್ಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಗುರವಾಗಿ ಮಾತನಾಡಿದ್ದಾರೆ ಎಂಬ ವಿಷಯದ ಬಗ್ಗೆ ಜಿಲ್ಲೆಯಲ್ಲಿ ಪರ ವಿರೋಧ ಚರ್ಚೆಗಳ ಸದ್ದು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಜಿಲ್ಲೆಯಲ್ಲದೆ ರಾಜ್ಯಾದ್ಯಂತ ಶಾಸಕರ ಮಾತು ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, ನಾನು ಈ ದೇಶದ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಅವರ ಬಗ್ಗೆ ನಮಗೆ ಗೌರವವಿದೆ. ನಮ್ಮ ಹೆಣ್ಣುಮಕ್ಕಳ ಕುಂಕುಮವನ್ನು ಅಳಿಸಿದ ಕಿರಾತರಕರನ್ನು ಸದೆ ಬಡೆಯಲಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದೇನೆ. ಹಾಗೂ ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಉಗ್ರರನ್ನು ಸಾಯಿಸಿದ್ದೇವೆ ಎಂದು ತಿಳಿಸುತ್ತಿದ್ದಾರೆ. ಅದನ್ನು ಹೇಗೆ ನಂಬುವುದು ಎಂಬುದನ್ನು ಮಾತ್ರ ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಲು ಶಾಸಕರು ಹೊರಟಿದ್ದಾರೆ.

ಆದರೆ ವಿರೋಧ ಪಕ್ಷವಾದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಶಾಸಕರ ನಡೆ ಮತ್ತು ಮಾತಿನ ಬಗ್ಗೆ ತೀವ್ರವಾಗಿ ಖಂಡಿಸುತ್ತಾ ಶಾಸಕರ ಜನ್ಮ ಜಾಲಾಡುತ್ತಿದ್ದಾರೆ. ಇದು ಕೋಲಾರ ಜಿಲ್ಲೆಯ ಮುಖಂಡರದಲ್ಲ ರಾಜ್ಯಾದ್ಯಂತ ಶಾಸಕರ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಆದರೆ ಶಾಸಕರ ಪರವಾಗಿ ಕೋಲಾರದ ಅವರ ಅನುಯಾಯಿಗಳು ಹಾಗೂ ಪಕ್ಷದ ಕೆಲವು ಮುಖಂಡರು ಶಾಸಕ ಕೊತ್ತೂರು ಮಂಜುನಾಥ್ ಆ ರೀತಿ ಮಾತನಾಡಿಲ್ಲ. ನಮ್ಮ ಶಾಸಕರಿಗೆ ದೇಶ, ಯೋಧರ ಬಗ್ಗೆ ಗೌರವವಿದೆ. ಶಾಸಕರನ್ನು ತೇಜೋವಧೆ ಮಾಡಲು ವಿರೋಧ ಪಕ್ಷದ ಮುಖಂಡರು ವಿನಾ ಕಾರಣ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನಗಳನ್ನು ಹೊರ ಹಾಕುತ್ತಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ಚುನಾವಣೆಗಳ ದಿನಾಂಕ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆಯನ್ನು ವಿರೋಧಪಕ್ಷದವರು ಇದನ್ನು ರಾಜಕೀಯ ಅಸ್ತçವನ್ನಾಗಿ ಬಳಸಿಕೊಂಡು ಸ್ಥಳೀಯ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ.

ಈಗಾಗಲೇ ಕೊತ್ತೂರು ಮಂಜುನಾಥ್ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮತ್ತು ಬಿಜೆಪಿ ಮುಖಂಡರು ವಿವಾದಾತ್ಮಕ ಹೇಳಿಕೆಯ ವಿರುದ್ಧ ದೇಶದ್ರೋಹಿ ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಲು ಪೋಲಿಸ್ ಇಲಾಖೆಗೆ ದೂರು ನೀಡಿದ್ದಾರೆ.

ಕೇಸು ದಾಖಲಿಸಬೇಕೇ ಎಂಬುದರ ಬಗ್ಗೆ ಪೋಲಿಸರು ವಿಚಾರಣೆ ಹಂತದಲ್ಲಿಯೇ ಇದ್ದಾರೆ. ಇದೇ ತಿಂಗಳು ೨೮ ರಂದು ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಟಿಎಪಿಸಿಎಂಎಸ್‌ನಿAದ ಅಭ್ಯರ್ಥಿಯಾಗಲು ಕೊತ್ತೂರು ಮಂಜುನಾಥ್ ಮುಂದಾಗಿದ್ದಾರೆ. ಈ ಹಂತದಲ್ಲಿ ಕೊತ್ತೂರು ಮಂಜುನಾಥ್ ರವರ ವಿವಾದಾತ್ಮಕ ಹೇಳಿಕೆಯನ್ನು ಮುಂದಿಟ್ಟುಕೊAಡು ಚುನಾವಣೆಗೆ ಅಡ್ಡಿಪಡಿಸಲು ವಿರೋಧ ಪಕ್ಷದ ಮುಖಂಡರು ಹಾಗೂ ಸಂಘ ಸಂಸ್ಥೆಗಳವರು ಕಾಯುತ್ತಿದ್ದಾರೆ.

ಶಾಸಕ ಕೊತ್ತೂರು ಮಂಜುನಾಥ್ ರವರ ಜಾತಿ ಪ್ರಮಾಣ ಪತ್ರದ ವಿವಾದ ಕೋರ್ಟಿನಲ್ಲಿ ಕೇಸು ಬಾಕಿ ಇರುವಾಗಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಹೆಗಲಿಗೆ ಏರಿಸಿಕೊಂಡAತಾಗಿದ್ದು, ಇದು ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕಾಂಗ್ರೇಸ್‌ನ ರಾಜ್ಯ ನಾಯಕರು ಕೊತ್ತೂರು ಹೇಳಿಕೆಗೆ ಪುಷ್ಟಿ ನೀಡುವ ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳದಿದ್ದರೂ ವಾಸ್ತವಾಂಶದ ಬಗ್ಗೆ ಕೊತ್ತೂರು ಮಂಜುನಾಥ್ ಮಾತನಾಡಲು ಮುಂದಾಗಿದ್ದಾರೆ. ಅವರು ಯಾರನ್ನು ಟೀಕೆ ಮಾಡಿಲ್ಲ ಎನ್ನುವ ರೀತಿಯ ದಾಟಿಯಲ್ಲಿ ರಾಜ್ಯ ನಾಯಕರು ಕೊತ್ತೂರು ಮಂಜುನಾಥ್ ಬೆನ್ನಿಗೆ ನಿಂತAತೆ ಕಾಣುತ್ತದೆ.

ಜಿಲ್ಲೆಯಲ್ಲಂತು ಸದ್ಯಕ್ಕೆ ಶಾಸಕ ಕೊತ್ತೂರು ಮಂಜುನಾಥ್ ರವರ ಸಿಂಧೂರ ಆಪರೇಷನ್ ಹೇಳಿಕೆಯ ಸದ್ದು ಕೇಳುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಶಾಸಕರ ವಿರುದ್ಧ ಅವಹೇಳನಾಕಾರಿ ಪೋಸ್ಟರ್‌ಗಳು ಹಾಗೂ ಟೀಕೆಗಳನ್ನು ಹೊರಹಾಕುತ್ತಿದ್ದಾರೆ.

ಚಿತ್ರ ೧೮ ಕೆ.ಎಲ್.ಆರ್. ೦೧ : ಶಾಸಕ ಕೊತ್ತೂರು ಮಂಜುನಾಥ್ ರವರ ವಿರದ್ಧ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ದೂರು ನೀಡಲು ತೆರಳುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮತ್ತು ಮುಖಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net