

* ಜೆ.ಜಿ.ಶ್ರೀನಿವಾಸಮೂರ್ತಿ ಬೇತಮಂಗಲ
ಸ್ವಚ್ಛತೆ, ದಾಖಲೆಗಳ ನಿರ್ವಹಣೆ, ರೋಗಿಗಳಿಗೆ ಸೇವೆ ನೀಡುವುದು ಸೇರಿ ಹಲವು ವಿಭಾಗಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಪ್ರಶಸ್ತಿಗಳಿಗೆ ಭಾಜನವಾಗಿದ್ದ ಕೆಜಿಎಫ್ ತಾಲೂಕಿನ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ಸೌಲಭ್ಯಗಳ ಕೊರತೆಯಿದ್ದು, ಅಗತ್ಯ ಚಿಕಿತ್ಸೆಗೆ ಸರ್ಕಾರ ನೆರವು ನೀಡಬೇಕಿದೆ.
ಸೌಲಭ್ಯಗಳ ಕೊರತೆಯಿಂದಾಗಿ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಕೆಜಿಎಫ್, ಕೋಲಾರ ಮತ್ತು ಬೆಂಗಳೂರಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ಯಂತ ತುರ್ತು ಸಂದರ್ಭಗಳಲ್ಲಿ ಬೇಕಾಗಿರುವ ಅವಶ್ಯ ಉಪಕರಣಗಳು ಇಲ್ಲದ ಕಾರಣ "ಆಪರೇಶನ್ ಸಕ್ಸಸ್ ಪೇಷೆಂಟ್ ಡೆಡ್' ಎಂಬ ಪರಿಸ್ಥಿತಿಯಲ್ಲಿದೆ ಬೇತಮಂಗಲ ಆಸ್ಪತ್ರೆ.
ಸ್ತಿ$ರೋಗ, ಮಕ್ಕಳು, ಅರಿವಳಿಕೆ ಮತ್ತು ದಂತ ವೈದ್ಯರೂ ಕರ್ತವ್ಯ ನಿರ್ವಹಿಸುತ್ತಿದ್ದು, ಮೂವರು ಆರೋಗ್ಯ ನಿರೀಕ್ಷಕರು, 6 ಮಂದಿ ಆರೋಗ್ಯ ಸುರಾ ಅಧಿಕಾರಿಗಳು, 6 ಮಂದಿ ಸಮುದಾಯ ಶುಶ್ರೂಷಾಧಿಕಾರಿಗಳು, 8 ಮಂದಿ ಗ್ರೂಪ್ ಡಿ ನೌಕರರು, ನಾಲ್ವರು ಸಮುದಾಯ ಆರೋಗ್ಯ ಉಪ ಕೇಂದ್ರಗಳ ಶುಶ್ರೂಷಕರು, ಔಷಧ ವಿತರಣೆ, ಪ್ರಯೋಗಾಲಯ ಮತ್ತು ಕಚೇರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳಾದ ಆಯುಷ್ಮಾನ್ ಭಾರತ್, ನರರೋಗ ಮಾಹಿತಿ ವಿಭಾಗ, ಅಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗ ಸೇರಿ ಒಟ್ಟು 5 ಮಂದಿ ಸಿಬ್ಬಂದಿ ಸೇರಿ ಒಟ್ಟು 40ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಜತೆಗೆ 40 ಮಂದಿ ಆಶಾ ಕಾರ್ಯಕರ್ತರು ಸಮುದಾಯ ಕೇಂದ್ರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುತ್ತಮುತ್ತಲ ಭಾಗಗಳಿಂದ ಬರುವ ನೂರಾರು ಮಂದಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲಾಗುತ್ತಿದೆ.
* ಸುಸಜ್ಜಿತ ಕಟ್ಟಡವಿದ್ದರೂ ಸೌಲಭ್ಯ ವಂಚನೆ
ವಿಶಾಲ ಆವರಣದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಟ್ಟಡದಲ್ಲಿ ಎಲ್ಲ ಸೌಲಭ್ಯಗಳಿದ್ದರೂ, ಕಳೆದ 5 ವರ್ಷಗಳ ಹಿಂದೆ ಬಂದಿದ್ದ ಕೋವಿಡ್ ನಿಯಂತ್ರಣಕ್ಕಾಗಿ ಆಕ್ಸಿಜನ್ ಟಕದ ನಿರ್ಮಾಣ ಮಾಡಲಾಗಿದೆ. ಉತ್ಪಾದನೆ ಮತ್ತು ಸರಬರಾಜು ಟಕ ಸ್ಥಾಪನೆ ಮಾಡಲಾಗಿದ್ದು, ತುರ್ತು ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಲಾಗುತ್ತಿದೆ.
ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಿಗಬಹುದಾದ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತಿದೆ. ಆದರೆ ಅಗತ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಬೇಕಾದ ಸೌಲಭ್ಯಗಳು ಇಲ್ಲದ ಕಾರಣಕ್ಕೆ ಎಲ್ಲವೂ ಇದ್ದೂ ಏನೂ ಇಲ್ಲದಂತಾಗಿದೆ!.
* ವೈದ್ಯಾಧಿಕಾರಿಯೂ ಇಲ್ಲ... .ಕಾವಲುಗಾರನೂ ಇಲ್ಲ...
ಎಲ್ಲ ರೀತಿಯ ನೌಕರರ ನಡುವೆೆ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಯನ್ನು ಹಲವು ವರ್ಷಗಳಿಂದ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಸ್ತಿ$ ರೋಗ ತೆ ಡಾ.ಸಂಸತಿ ಅವರೇ ಹೆಚ್ಚುವರಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡೂ ಹುದ್ದೆಗಳನ್ನು ನಿಭಾಯಿಸುತ್ತಿರುವ ಮಧ್ಯೆ ಅವರಿಗೂ ಒತ್ತಡ ಹಾಕಲಾಗುತ್ತಿದೆ. ಆದ್ದರಿಂದ ಹಿರಿಯ ಆಡಳಿತ ವೈದ್ಯಾಧಿಕಾರಿ ಹುದ್ದೆ ಭರ್ತಿ ಮಾಡಬೇಕು. ಜತೆಗೆ ಹಿರಿಯ ಸುರಕ್ಷತಾ ಅಧಿಕಾರಿ ಹುದ್ದೆಯನ್ನು ಪ್ರಾಥಮಿಕ ಸುರಕ್ಷತಾ ಅಧಿಕಾರಿ ದೀಪ್ತಿ ಜವಾಬ್ದಾರಿ ವಹಿಸಿಕೊಂಡಿದ್ದು, ಇವರೂ ಸಾಕಷ್ಟು ಒತ್ತಡದ ನಡುವೆ ಕಾರ್ಯ ನಿರ್ವಹಿಸುವಂತಾಗಿದೆ. ಈ ಹುದ್ದೆಯನ್ನೂ ಭರ್ತಿ ಮಾಡಬೇಕಿದೆ.
* ಭಯದ ವಾತಾವರಣದಲ್ಲಿ ಕರ್ತವ್ಯ
ನಿತ್ಯ ಕನಿಷ್ಠ 300 ರಿಂದ 400 ರೋಗಿಗಳು ಭೇಟಿ ನೀಡುತ್ತಿದ್ದು, ಹತ್ತಾರು ಮಂದಿ ಒಳರೋಗಿಗಳಾಗಿ ನೋಂದಣಿ ಮಾಡಿಕೊಳ್ಳುತ್ತಾರೆ. ಹೆರಿಗೆ ಅಥವಾ ಶಸ್ತ್ರ ಚಿಕಿತ್ಸೆಗಳನ್ನು ನಡೆಸುವ ಮತ್ತು ಅನೇಕ ಸಂದರ್ಭಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಒಳ ರೋಗಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇಷ್ಟು ದೊಡ್ಡ ಆಸ್ಪತ್ರೆಗೆ ಕನಿಷ್ಠ ಭದ್ರತಾ ಸಿಬ್ಬಂದಿ ಇಲ್ಲದಿರುವುದು ರಾತ್ರಿ ಮಹಿಳಾ ಸಿಬ್ಬಂದಿಯೇ ಕೆಲಸ ನಿರ್ವಹಿಸುವುದರಿಂದ ಭಯದ ವಾತಾವರಣದಲ್ಲಿಯೇ ಕರ್ತವ್ಯ ನಿರ್ವಹಿಸುವಂತಾಗಿದೆ.
ಕೋಟ್...
ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುವ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಕಲ್ಪಿಸಲಾಗುತ್ತಿದೆ. ಆದರೆ ರಾತ್ರಿ ಗಲಾಟೆಗಳು, ಅಫಘಾತ, ಹೃದಯಾಘಾತ, ಹೆರಿಗೆ ಸೇರಿ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಚಿಕಿತ್ಸೆ ನೀಡಲು ವೈದ್ಯರು ಇರುವುದಿಲ್ಲ. ಹಿರಿಯ ವೈದ್ಯಾಧಿಕಾರಿ ಹುದ್ದೆ ಭರ್ತಿ ಮಾಡಿದರೆ ಮತ್ತಷ್ಟು ಸೇವೆ ಸಲ್ಲಿಬಹುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ವೈದ್ಯರು ಬೇಕಾಗಿದೆ.
- ವಿನು ಕಾರ್ತಿಕ್, ಅಧ್ಯಕ್ಷ, ಬೇತಮಂಗಲ ಗ್ರಾಪಂ, ಆರೋಗ್ಯ ರಾ ಸಮಿತಿ ಸಮುದಾಯ ಆರೋಗ್ಯ ಕೇಂದ್ರ. ಬೇತಮಂಗಲ,
ಕೋಟ್...
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರ್ಹತೆಗೆ ತಕ್ಕಂತೆ ಎಲ್ಲ ವ್ಯವಸ್ಥೆಗಳನ್ನು ಇಲಾಖೆ ಒದಗಿಸಿದೆ. ಹಿರಿಯ ವೈದ್ಯಾಧಿಕಾರಿ ಹುದ್ದೆ ಮತ್ತು ಫಿಸಿಶಿಯನ್ ವೈದ್ಯರೂ ಬೇಕಾಗಿದ್ದಾರೆ. ಜತೆಗೆ ಅಗತ್ಯಕ್ಕೆ ತಕ್ಕಂತೆ ಔಷಧಗಳ ಪೂರೈಕೆ ಆಗಬೇಕಾಗಿದೆ. ಎಲ್ಲ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಳ್ಳುವಂತಾಗಿದೆ.
- ಡಾ.ಸಂಸತಿ, ಹೆಚ್ಚುವರಿ ಆಡಳಿತಾಧಿಕಾರಿ.
ತುರ್ತು ಅಗತ್ಯ ಏನು?
1. ಎಕ್ಸ್ ರೇ ಯಂತ್ರ
2.ಸ್ಕ್ಯಾನಿಂಗ್ ಯಂತ್ರ
3. ರಕ್ತ ಪರೀಕ್ಷೆ ಮತ್ತು ಸಂಗ್ರಹಣಾ ಕೇಂದ್ರ