

ಸೌಜನ್ಯಾ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಆ.22ರಂದು ಬೆಳಗ್ಗೆ 10.30ಕ್ಕೆ ನಗರದಲ್ಲಿ ಭಾರತ ಭೀಮ್ ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ಹತ್ಯೆ ನಡೆದು 13 ವರ್ಷವಾಗಿದ್ದು, ತನಿಖೆಗಳು ನಡೆದರೂ ಸತ್ಯಾಂಶ ಹೊರ ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಸೌಜನ್ಯಾ ಕುಟುಂಬದ ಪರ ಧ್ವನಿ ಕೇಳಿಬಂದಿತ್ತು. ಆದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಹೀಗಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದೇ ರೀತಿ ರಾಜ್ಯದ ಇತರೆಡೆಯೂ ಹಮ್ಮಿಕೊಳ್ಳುತ್ತಿದ್ದು, ಅಂತಿಮವಾಗಿ ಈ ಎಲ್ಲ ಜಿಲ್ಲೆಯವರೂ ಸೇರಿ ಧರ್ಮಸ್ಥಳಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹೊರಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.