ಸೈನಿಕರೊಂದಿಗೆ ಕಾರ್ಗಿಲ್ ವಿಜಯ ದಿವಸ ಆಚರಣೆ

26-RNR-07
Published on

ರಾಣೆಬೆನ್ನೂರ: ವಿದ್ಯಾರ್ಥಿಗಳು ದೇಶ ಪ್ರೇಮ ಬೆಳೆಸಿಕೊಂಡು ಭವಿಷ್ಯದಲ್ಲಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರ್ನಾಟಕ 27 ಬೆಟಾಲಿಯನ್ ಸುಬೇದಾರ್ ಬ್ರಹ್ಮಭೂಷಣ ಹೇಳಿದರು.
ತಾಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ್ ಲರ್ನ್ ಸ್ಕೂಲಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಗಿಲ್ ಪ್ರದೇಶದ ಬಳಿ ಕುತಂತ್ರದಿಂದ ನಮ್ಮ ದೇಶದ ಗಡಿಯೊಳಕ್ಕೆ ನುಗ್ಗಿದ್ದ ವೈರಿ ದೇಶದ ಸೈನಿಕರನ್ನು ನಮ್ಮ ದೇಶದ ಯೋಧರು ವೀರಾವೇಶದಿಂದ ಕಾದಾಡಿ ಹೊಡೆದೊಡಿಸಿದರು. ಈ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ 27 ಬೆಟಾಲಿಯನ್ ಹವಾಲ್ದಾರ್ ಗಣೇಶ ವಾಘ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರಶಾಂತ ಕಡಕೋಳ, ಕವಿತಾ ಕಡಕೋಳ, ರಾಜೇಶ್ವರಿ ಹನಗೋಡಿಮಠ, ಪ್ರಾಚಾರ್ಯ ರೂಪೇಶ ಘಾಟಗೆ, ಶಿಕ್ಷಕರಾದ ಮಮತಾ ಘಾಟಗೆ, ಗೀತಾ, ರುಕ್ಸಾನ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net