ಸೇತುವೆ ಬಳಿ ಕಾರು ಡಿಕ್ಕಿ

13KDR2 car
ಕಡೂರಿನ ನಾಯಿಸಾಡ್ಲಿ ಸೇತುವೆ ಬಳಿ ಟ್ರಾೃಕ್ಟರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿರುವುದು.
Published on

ಕಡೂರು: ತಾಲೂಕಿನ ಮಚ್ಚೇರಿ ಬಳಿಯ ನಾಯಿಸಾಡ್ಲಿ ಸೇತುವೆ ಬಳಿ ಸೋಮವಾರ ಟ್ರಾೃಕ್ಟರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಟ್ರಾೃಕ್ಟರ್ ಚಾಲಕನಿಗೆ ಗಾಯಗಳಾಗಿದ್ದು ಕಡೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡೂರು ಕಡೆಯಿಂದ ತೆರಳುತ್ತಿದ್ದ ಕಾರು ನಾಯಿಸಾಡ್ಲಿ ತಿರುವಿನಲ್ಲಿ ಎದುರಿಗೆ ಬಂದ ಟ್ರಾೃಕ್ಟರ್‌ಗೆ ಡಿಕ್ಕಿಯಾಗಿದೆ. ಟ್ರಾೃಕ್ಟರ್ ಚಾಲಕ ವಿನಯ್ ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು ಟ್ರಾಕ್ಟರ್‌ನ ದೊಡ್ಡಚಕ್ರಗಳು ಮುರಿದು ಹೋಗಿವೆ. ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಸ್ತೆ ಬದಿಯಲ್ಲಿ ಜಲಜೀವನ್ ಯೋಜನೆಯ ಪೈಪ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಅಪಘಾತ ನಡೆದ ಸ್ಥಳದಲ್ಲಿ ಕಾಮಗಾರಿ ಕೆಲಸ ಮುಗಿದಿದ್ದರೂ ಅಲ್ಲಿ ಮಣ್ಣನ್ನು ಹಾಗೆಯೇ ಬಿಡಲಾಗಿದ್ದು ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇಲ್ಲಿನ ತಿರುವುಗಳಲ್ಲಿ ದಟ್ಟವಾಗಿ ಗಿಡಗಂಟಿಗಳು ಬೆಳೆದಿದ್ದು ಎದುರಿನಿಂದ ಬರುವ ವಾಹನಗಳು ಕಾಣದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಗಿಡಗಂಟಿಗಳ ತೆರವು ಕಾರ್ಯಾಚರಣೆ ನಡೆಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net