ಸೆಕೆಂಡ್ ಹ್ಯಾಂಡ್ ಗೃಹ ಉಪಯೋಗಿ ದಾಸ್ತಾನು ಶೆಡ್ಡಿಗೆ ಆಕಸ್ಮಿಕ ಬೆಂಕಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ನಗರದ ಕಾರಂಜಿ ಕಟ್ಟೆಯ ವಾರ್ಡ್ ನಂ.೨೭ರ ರಾಜಾ ನಗರದಲ್ಲಿ ನೂತನವಾಗಿ ನಿರ್ಮಿಸಿದ್ದ ಸೆಕೆಂಡ್ ಹ್ಯಾಂಡ್ ಗೃಹ ಉಪಯೋಗಿ ವಸ್ತುಗಳ ದಾಸ್ತಾನು ಶೆಡ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಸ್ತುಗಳು ಭಸ್ಮವಾಗಿ ಬಾರೀ ಅನಾಹುತದಿಂದ ಸಾರ್ವಜನಿಕರು ಪಾರಾಗಿದ್ದಾರೆ.

ಭಾನುವಾರ ಬೆಳ್ಳಿಗ್ಗೆ ೧೦.೩೦ ರ ಸಮಯದಲ್ಲಿ ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಗರಸಭಾ ಅಧ್ಯಕ್ಷೆ ಲಕ್ಷಿö್ಮÃದೇವಮ್ಮ ರಮೇಶ್ ಅಗ್ನಿಶಾಮಕ ಮತ್ತು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸಿ ಬೆಂಕಿ ಅಕ್ಕಪಕ್ಕದ ವಾಸದ ಮನೆಗಳಿಗೆ ಹರಡದಂತೆ ಬೆಂಕಿ ನಂದಿಸಿದ ಪ್ರಯುಕ್ತ ಅನಾಹುತಗಳನ್ನು ತಪ್ಪಿಸಿದ್ದಾರೆ.

ನೂತನವಾಗಿ ಶೆಡ್ ನಿರ್ಮಾಣ ಮಾಡಿರುವ ಮಾಲೀಕ ನೂರ್ ಶೆಡ್‌ನಲ್ಲಿದ್ದ ಸೆಕೆಂಡ್ ಹ್ಯಾಂಡ್ ಗೃಹ ಉಪಯೋಗಿ ವಸ್ತುಗಳು ಸುಟ್ಟು ಭಸ್ಮ ಆಗಿದ್ದರೂ ಭಾನುವಾರದ ಸಂಜೆ ತನಕ ಪೋಲಿಸರಿಗೆ ದೂರು ನೀಡಿಲ್ಲ. ಆದ ಕಾರಣ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿರಲಿಲ್ಲ.

ನಗರಸಭಾ ಅಧ್ಯಕ್ಷೆ ಲಕ್ಷಿö್ಮÃದೇವಮ್ಮ ಮಾತನಾಡಿ, ಇನ್ನು ಬಿಸಿಲು ಕಾಲ ಸಮೀಪಿಸುತ್ತಿದೆ. ಬೆಂಕಿ ಅವಘಡಗಳು ಸಂಭವಿಸುತ್ತಿರುತ್ತವೆ. ಜಾಗೃತಿಯಿಂದ ಇರಬೇಕು. ಶೆಡ್ಡುಗಳು ನಿರ್ಮಿಸುವಾಗ ಸಂಬAಧಪಟ್ಟ ಇಲಾಖೆಯಿಂದ ಪರವಾನಗಿಯನ್ನು ಪಡೆಯಬೇಕು. ಮತ್ತು ಕಡ್ಡಾಯವಾಗಿ ಇನ್ಸೂರೆನ್ಸ್ ಮಾಡಿಸಬೇಕು. ಬೆಂಕಿ ಬಿದ್ದ ತಕ್ಷಣ ಸ್ಥಳೀಯ ಸಹಕಾರದಿಂದ ಬಾರೀ ಅನಾಹುತವನ್ನು ತಪ್ಪಿಸಿದಂತೆ ಆಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮವಹಿಸಲು ಶೆಡ್ ಮಾಲೀಕರಿಗೆ ಸೂಚನೆ ನೀಡಿದರು.

ಬೆಂಕಿ ಆರಿಸಲು ಸ್ಥಳೀಯರಾದ ಎಂ.ಚAದ್ರಮೌಳಿ, ಪ್ಯಾರೆಜಾನ್, ಮೃತ್ಯುಂಜಯ, ಎಂ.ಡಿ.ಆಸೀಫ್. ಫಯಾಜ್ ಮಾಮು. ಅಂಗಡಿ ಮೋಲಿಸಾಬ್. ವಾಟರ್ ಮ್ಯಾನ್ ಅಂಜದ್.ಸುಮನ್. ಜಿ.ಮುರಳಿ.ರಾಜೇಶ್. ಇರ್ಫಾನ್ ಖಾನ್, ನವಾಜ್ ಬೇಗ್, ಸಿರಾಜ್ ಪಾಷಾ, ನಾಸೀರ್

ಸುಬ್ರಮಣಿ, ನೂರ್ ಸಾಬ್, ರಿಜ್ವಾನ್ ರವರುಗಳು ಸಹಕರಿಸಿದರು.

ಚಿತ್ರ ೦೨ ಕೆ.ಎಲ್.ಆರ್. ೦೭ : ನಗರದಲ್ಲಿ ಸೆಕೆಂಡ್ ಹ್ಯಾಂಡ್ ಗೃಹ ಉಪಯೋಗಿ ವಸ್ತುಗಳ ದಾಸ್ತಾನು ಶೆಡ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net