ಸೆ.1ರಂದು ಕುಂಚೇನಹಳ್ಳಿ ಕೆರೆಗೆ ಬಾಗಿನ: ಕೆ.ಎಲ್.ಜಗದೀಶ್ವರ್

29 smg Jagadiesh - Copy
Published on

ಶಿವಮೊಗ್ಗ: ಗೌರಿ-ಗಣೇಶ ಪೂಜಾ ಕಾರ್ಯಕ್ರಮ ಮತ್ತು ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಸೆ.1ರಂದು ಬೆಳಗ್ಗೆ 11.30ಕ್ಕೆ ಕುಂಚೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ತಿಳಿಸಿದರು.

ಗ್ರಾಮದಲ್ಲಿ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ. ಗಣೇಶನಿಗೆ ಅಲಂಕಾರ ಮಾಡಿದಂತೆ ಗೌರಿಯನ್ನೂ ಅಲಂಕರಿಸಲಿದ್ದು, ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗಜಗೌರಿ ಪೂಜೆ ಜತೆಗೆ ಹಲವು ವರ್ಷಗಳ ಬಳಿಕ 42 ಎಕರೆ ವಿಸ್ತೀರ್ಣವಿರುವ ಕುಂಚೇನಹಳ್ಳಿ ಕೆರೆ ಭರ್ತಿಯಾಗಿದ್ದು ಇದೇ ಸಂದರ್ಭದಲ್ಲಿ ಬಾಗಿನ ಅರ್ಪಣೆ ಮಾಡಲಾಗುವುದು. ಹರಿಹರ ಸಿದ್ದಲಿಂಗೇಶ್ವರ ಗದ್ದುಗೆ ಮಠಾಧ್ಯಕ್ಷ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಪಾಲ್ಗೊಳ್ಳುವರು. ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಬಸವೇಶ್ವರ ವೀರಶೈವ ಸಮಾಜದ ಸೇವಾ ಸಮಿತಿಗೆ ಆಯ್ಕೆಯಾದ ನಿರ್ದೇಶಕರು, ಗ್ರಾಮದ ನಿವೃತ್ತ ಸೈನಿಕರು, ಅಂಚೆ ಇಲಾಖೆ ನೌಕರರನ್ನು ಸನ್ಮಾನಿಸಲಾಗುವುದು ಎಂದರು.

ಪ್ರಮುಖರಾದ ಕೆ.ಸಿ.ಲೋಕೇಶ್ ನಾಯ್ಕ್, ಕೆ.ಜೆ.ನಾಗೇಶ್ ನಾಯ್ಕ್, ತ್ಯಾವರಾ ನಾಯ್ಕ್, ಚಂದ್ರಾ ನಾಯ್ಕ್, ಷಣ್ಮುಖ ಬಿಕ್ಕೋನಹಳ್ಳಿ, ಕರಿಬಸಪ್ಪ, ನಾಗರಾಜಪ್ಪ, ಮಹೇಶ್ವರಪ್ಪ, ಶಿವಾಜಿ, ಉದಯ ಶೆಟ್ಟಿ, ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net