ಸುಬ್ರಹ್ಮಣ್ಯ, ಚಿಕ್ಕಮಣಿಗೆ ಒಲಿದ ಅದೃಷ್ಟ

04HDK 01 (1)
ಡಿ.ಬಿ.ಕುಪ್ಪೆ ಗ್ರಾಪಂ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಮಿ ಆಯ್ಕೆಯಾದರು.
Published on

ಎಚ್.ಡಿ.ಕೋಟೆ: ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಚುನಾಯಿಯರಾದರೆ, ಉಪಾಧ್ಯಕ್ಷೆಯಾಗಿ ಚಿಕ್ಕಮಣಿ ಅವಿರೋಧ ಆಯ್ಕೆಯಾದರು.

15 ಸದಸ್ಯರ ಬಲವಿರುವ ಪಂಚಾಯಿತಿಗೆ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಸುಬ್ರಹ್ಮಣ್ಯ 9 ಮತ ಪಡೆದರೆ, ಪ್ರತಿ ಸ್ಪರ್ಧಿ ಚಲುವೇಗೌಡ 7 ಮತ ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಗೋವಿಂದ ನಾಯಕ ಕಾರ್ಯ ನಿರ್ವಹಿಸಿದರು.

ಸದಸ್ಯರಾದ ರಮೇಶ್, ದೇವರಸೆಗೌಡ, ಕಡೆಗದ್ದೆ ಜಯಮ್ಮ, ಜಯ, ಶಾರದಾ, ಕಮಲಮ್ಮ, ಹೊಸೂರು ಜಯಮ್ಮ, ಜಿ.ಡಿ.ವೆಂಕಟೇಗೌಡ, ಪುರುಷೋತ್ತಮ, ಚಲುವೇಗೌಡ, ರತ್ನಮ್ಮ, ವೆಂಕಟೇಶ್, ರತ್ನಮ್ಮ ದೇವರಸೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net