ಸುದ್ದಿ ನೈಜತೆ ತಿಳಿಯಲು ಪೊಲೀಸರ ನಂಬರ್ 94498 78805ಗೆ ವಾಟ್ಸ್‌ಆ್ಯಪ್ ಮಾಡಿ

DG
Published on

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅನುಮಾನಾಸ್ಪದ ಸುದ್ದಿಗಳ ನೈಜತೆ ತಿಳಿಸಲು ರಾಜ್ಯ ಪೊಲೀಸ್ ಇಲಾಖೆಯಿಂದ ವಾಟ್ಸ್‌ಆ್ಯಪ್ ನಂಬರ್ ಪರಿಚಯಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ವಾಟ್ಸ್‌ಆ್ಯಪ್ ನಂಬರ್ 94498 78805 ಪರಿಚಯಿಸಿದ್ದಾರೆ. ೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಇನ್ನಿತ್ತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನುಮಾನಾಸ್ಪದ ಸುದ್ದಿಗಳು ಮತ್ತು ೆಸ್ಟರ್‌ಗಳನ್ನು ಕಳುಹಿಸಿದರೆ ವಿಶೇಷ ಪೊಲೀಸ್ ತಂಡ ಆ ಸುದ್ದಿ ನಿಜವಾ ಅಥವಾ ಸುಳ್ಳ ಎಂಬುದನ್ನು ಪರೀಕ್ಷೆ ನಡೆಸಿ ಖಚಿತ ಮಾಹಿತಿ ನೀಡಲಿದ್ದಾರೆ. ನೈಜವಾಗಿದ್ದರೇ ಆನಂತರ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ಇಲ್ಲವಾದರೆ, ಅನಗತ್ಯವಾಗಿ ಶೇರ್ ಮಾಡಬೇಡಿ ಎಂದು ಪ್ರವೀಣ್ ಸೂದ್ ಮನವಿ ಮಾಡಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆ ಈಗಾಗಲೇ ್ಯಾಕ್ಟ್ ಚೆಕ್ ವೆಬ್‌ಸೈಟ್ ತೆರೆದಿದೆ. ಇದರಲ್ಲಿ ನಾಗರಿಕರು ಅಪ್‌ಲೋಡ್ ಮಾಡುವ ಸುದ್ದಿಗಳ ನೈಜತೆ ಪರೀಕ್ಷೆ ನಡೆಸಿ ಪ್ರತಿಕ್ರಿಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net