ಸುಗಮ ಸಂಗೀತ ಸಮ್ಮೇಳನ ಪ್ರಚಾರ ವಾಹನಕ್ಕೆ ಚಾಲನೆ

17
Published on

ನಗರದ ಕಲಾಮಂದಿರದಲ್ಲಿ ಆ.2 ಮತ್ತು 3 ರಂದು ನಡೆಯಲಿರುವ 19ನೇ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನದ ಪ್ರಚಾರ ವಾಹನಕ್ಕೆ ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಸೋಮವಾರ ಚಾಲನೆ ನೀಡಿದರು.

ಕಲಾಮಂದಿರ ಎದುರು ನಡೆದ ಸರಳ ಕಾರ್ಯಕ್ರಮಕ್ಕೆ ಅವರು ಹಸಿರು ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಎಂ.ಚಂದ್ರಶೇಖರ್, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಕವಿ ಜಯಪ್ಪ ಹೊನ್ನಾಳಿ ಇತರರಿದ್ದರು.

ಇದಕ್ಕೂ ಮೊದಲು ಸುಚಿತ್ರಾ ಗ್ಯಾಲರಿಯಲ್ಲಿ ಸಂಘಟನಾ ಸಮಿತಿಯ ಸಭೆ ನಡೆಯಿತು. ಗೀತೋತ್ಸವ ಶೀರ್ಷಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರ ಶ್ರೀನಿವಾಸ ಉಡುಪ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net